Monday, 12th May 2025

2 ಸುದ್ದಿ ವೆಬ್‌ಸೈಟ್‌, 20 ಯೂಟ್ಯೂಬ್ ಚಾನೆಲ್‌ ಬ್ಯಾನ್‌

#Youtube channel ban

ನವದೆಹಲಿ: ಗಡಿಯಲ್ಲಿ ಭಾರತ ಸೇನೆಯನ್ನು ಮಣಿಸಲು ಪಾಕಿಸ್ತಾನ,‌ ಬೇರೆ ಮಾರ್ಗ ಹಿಡಿದಿದೆ. ಭಾರತದಲ್ಲಿ ಭಯೋತ್ಪಾದನೆ ಮತ್ತು ಅಪನಂಬಿಕೆ ಯನ್ನು ಹರಡಲು ಪಾಕಿಸ್ತಾನ ಇಂಟರ್ನೆಟ್ ಮೊರೆ ಹೋದಂತಿದೆ.

ಈ ನೀಚ ಕೃತ್ಯವನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ 2 ಸುದ್ದಿ ವೆಬ್‌ಸೈಟ್‌ಗಳು ಮತ್ತು 20 ಯೂಟ್ಯೂಬ್ ಚಾನೆಲ್‌ಗಳ ಮೇಲೆ ನಿರ್ಬಂಧ ಹೇರಿದೆ.

ಇಂಟರ್ನೆಟ್ ಮೂಲಕ ಭಾರತ ವಿರೋಧಿ ಚಟುವಟಿಕೆ ಪ್ರೋತ್ಸಾಹ ನೀಡುತ್ತಿರುವವರ ವಿರುದ್ಧ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳುತ್ತಿದೆ. ಪಾಕಿಸ್ತಾನ ದಲ್ಲಿ ಕುಳಿತಿರುವ ದುಷ್ಟರು ಯೂಟ್ಯೂಬ್ ಮೂಲಕ ಭಾರತ ವಿರೋಧಿ ಮತ್ತು ಸುಳ್ಳು ಸುದ್ದಿಗಳನ್ನು ಹರಡುವ ಕೆಲಸ ಮಾಡುತ್ತಿದ್ದಾರೆ.

15 ಯೂಟ್ಯೂಬ್ ಚಾನೆಲ್‌ಗಳನ್ನು ಹೊಂದಿರುವ ‘ನಯಾ ಪಾಕಿಸ್ತಾನ್ ಗ್ರೂಪ್’ ಭಾರತದತ್ತ ಗಮನ ಹರಿಸಿದೆ. ಈ ಎಲ್ಲಾ ಯೂಟ್ಯೂಬ್ ಚಾನೆಲ್‌ಗಳಲ್ಲಿ ಭಾರತ ವಿರೋಧಿ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತದೆ.