Monday, 12th May 2025

ನಿರ್ಮಾಣ ಹಂತದ ಮನೆ ಕುಸಿತ: ಇಬ್ಬರು ಮಕ್ಕಳ ಸಾವು

ಮಲಪ್ಪುರಂ: ಜಿಲ್ಲೆಯ ಕರಿಪುರದಲ್ಲಿ ಮಂಗಳವಾರ ಮನೆ ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿ ದ್ದಾರೆ. ಕೇರಳದ ವಿವಿಧ ಕಡೆಗಳಲ್ಲಿ ಭಾರಿ ಪ್ರಮಾಣ ದಲ್ಲಿ ಮಳೆಯಾಗುತ್ತಿದೆ.

ಆರು ತಿಂಗಳ ಮಗು ಮತ್ತು ಆಕೆಯ ಸಹೋದರಿ ಎಂಟು ವರ್ಷದ ಬಾಲಕಿ ಮೃತಪಟ್ಟಿದ್ದಾರೆ. ಮಕ್ಕಳು, ಮುಂಡೋಟ್ಟುಪದಮ್ ಸಮೀಪದ ಮಠಮ್‌ ಕುಲಂನಲ್ಲಿನ ತನ್ನ ಅಜ್ಜನ ಮನೆಯಲ್ಲಿ ವಾಸವಿದ್ದರು.

ಭೆಳಿಗ್ಗೆ ಸುರಿದ ಭಾರಿ ಮಳೆಯಿಂದಾಗಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಈ ಸಂತ್ರಸ್ತ ಕುಟುಂಬದ ನಿವಾಸದ ಮೇಲೆ ಕುಸಿದಿದೆ. ಪರಿಣಾಮವಾಗಿ ತೀವ್ರ ಗಾಯಗೊಂಡ ಮಕ್ಕಳನ್ನು ಕೋಯಿ ಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೂ ಚಿಕಿತ್ಸೆಗೆ ಸ್ಪಂದಿಸದೆ ಮಕ್ಕಳು ಮೃತಪಟ್ಟಿವೆ.

ಸೋಮವಾರದಿಂದ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮಂಗಳವಾರವೂ ರಾಜ್ಯದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 

Leave a Reply

Your email address will not be published. Required fields are marked *