Monday, 12th May 2025

ತ್ರಿಲೋಕಪುರಿಯಲ್ಲಿ ಎರಡು ಅನುಮಾನಾಸ್ಪದ ಬ್ಯಾಗ್‌ ಪತ್ತೆ: ಬಾಂಬ್ ಭೀತಿ ವ್ಯಕ್ತ

ನವದೆಹಲಿ: ಪೂರ್ವ ದೆಹಲಿಯ ತ್ರಿಲೋಕಪುರಿಯಲ್ಲಿ ಬುಧವಾರ ಮಧ್ಯಾಹ್ನ ಎರಡು ಅನುಮಾನಾ ಸ್ಪದ ಬ್ಯಾಗ್‌ಗಳು ಪತ್ತೆಯಾಗಿದ್ದು, ಆ ಪ್ರದೇಶದಲ್ಲಿ ಬಾಂಬ್ ಭೀತಿ ಉಂಟು ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ಬ್ಯಾಗ್‌ಗಳ ಬಗ್ಗೆ ದೆಹಲಿ ಪೊಲೀಸರಿಗೆ ಕರೆ ಬಂದ ಕೂಡಲೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಅಗ್ನಿಶಾಮಕ ಅಧಿಕಾರಿಗಳ ಪ್ರಕಾರ, ತ್ರಿಲೋಕಪುರಿ ಬ್ಲಾಕ್ -15ರ ಮೆಟ್ರೋ ಪಿಲ್ಲರ್ ಸಂಖ್ಯೆ 59ರ ಬಳಿ ಎರಡು ಬ್ಯಾಗ್‌ಗಳು ಇರುವ ಬಗ್ಗೆ ಮಧ್ಯಾಹ್ನ ಅವರಿಗೆ ಕರೆ ಬಂದಿತು. ಕಳೆದ ವಾರ, ಗಾಜಿಪುರದ ಹೂವಿನ ಮಾರುಕಟ್ಟೆಯಲ್ಲಿ ಚೀಲದಲ್ಲಿ ಆರ್‌ಡಿಎಕ್ಸ್ ಮತ್ತು ಅಮೋನಿಯಂ ನೈಟ್ರೇಟ್ ತುಂಬಿದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾಗಿತ್ತು.

ಸ್ಫೋಟಕವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಇರಿಸಲಾಗಿತ್ತು. ನಂತರ ಐಇಡಿಯನ್ನು ನಿಯಂತ್ರಿತ ಸ್ಫೋಟ ತಂತ್ರವನ್ನು ಬಳಸಿ 8 ಅಡಿಯ ಗುಂಡಿಯಲ್ಲಿ ಇಳಿಸಿ ಸ್ಫೋಟಿ ಸುವ ಮೂಲಕ ನಾಶಪಡಿಸಲಾಗಿತ್ತು.