Wednesday, 14th May 2025

ಟ್ರಕ್‌ಗೆ ಬೆಂಕಿ: ಕಂಡಕ್ಟರ್ ಸುಟ್ಟು ಕರಕಲು

ಕಥುವಾ: ಮ್ಮು ಕಾಶ್ಮೀರ ರಾಜ್ಯದ ರಾಜ್ಪಥ್ ಪ್ರದೇಶದ ಬಳಿಯ ಪಠಾಣ್ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಕಂಡಕ್ಟರ್ ಸುಟ್ಟು ಕರಕಲಾಗಿದ್ದಾನೆ.

ಕಂಡಕ್ಟರ್ ಉರಿಯುತ್ತಿರುವ ಟ್ರಕ್ ಒಳಗೆ ಸಿಕ್ಕಿಹಾಕಿಕೊಂಡಿದ್ದಾನೆ. ಘಟನೆಯ ಬಗ್ಗೆ ತಿಳಿದ ನಂತರ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ತಲುಪಿದರು.

ಬೆಂಕಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಕಥುವಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.