Monday, 12th May 2025

ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ಯೋಜನೆ ಮರು ಜಾರಿ

ಗರ್ತಲಾ: ತ್ರಿಪುರಾದಲ್ಲಿ ಅಧಿಕಾರಕ್ಕೆ ಬಂದರೆ ಮೊದಲ ನಿರ್ಧಾರ ಹಳೆಯ ಪಿಂಚಣಿ ಯೋಜನೆಯನ್ನು ಮರು ಪರಿಚಯಿಸುವುದು ಎಂದು ಹಿರಿಯ ಸಿಪಿಐ(ಎಂ) ನಾಯಕ ಪ್ರಕಾಶ್ ಕಾರಟ್ ಹೇಳಿದ್ದಾರೆ.

ಪಶ್ಚಿಮ ತ್ರಿಪುರಾ ಜಿಲ್ಲೆಯ ಖಯೇರ್‍ಪುರದಲ್ಲಿ ಚುನಾವಣಾಪೂರ್ವ ರ್ಯಾಲಿಯನ್ನ್ನುದ್ದೇಶಿಸಿ ಮಾತನಾಡಿ, ತ್ರಿಪುರಾದಲ್ಲಿ ಎಡಪಕ್ಷ ಸರ್ಕಾರ ಅಧಿಕಾರ ದಲ್ಲಿರುವವರೆಗೂ ಹೊಸ ಪಿಂಚಣಿ ಯೋಜನೆಯನ್ನು ಜಾರಿ ಗೊಳಿಸಲಾಗಿರಲಿಲ್ಲ ಎಂದರು.

2018ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಹೊಸ ಪಿಂಚಣಿ ಯೋಜನೆ ಜಾರಿಗೆ ತಂದಿದೆ ಎಂದರು.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದು, ತಾನು ಭರವಸೆ ನೀಡಿದಂತೆ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರು ಪರಿಚಯಿಸಿದೆ. ತ್ರಿಪುರಾದಲ್ಲಿ ಎಡ-ಕಾಂಗ್ರೆಸ್ ಮುಂದಿನ ಸರ್ಕಾರ ರಚಿಸಿದರೆ ಅದೇ ಕೆಲಸ ಮಾಡಲಾಗುವುದು ಎಂದರು.

ತ್ರಿಪುರಾದಲ್ಲಿ 1.88 ಲಕ್ಷ ರಾಜ್ಯ ಸರ್ಕಾರಿ ನೌಕರರ ಮತಗಳನ್ನು ಗೆಲ್ಲುವ ಪ್ರಯತ್ನದಲ್ಲಿ ಎಡರಂಗ ಮತ್ತು ಕಾಂಗ್ರೆಸ್ ಹಳೆಯ ಪಿಂಚಣಿ ಯೋಜನೆಯನ್ನು ಮರು ಪರಿಚಯಿಸುವ ಭರವಸೆ ನೀಡಿವೆ.ಬಿಜೆಪಿಯವರು ಹಣ ವ್ಯಯಿಸುತ್ತಿರುವ ವಿಧಾನದ ಬಗ್ಗೆ ಜನರು ಎಚ್ಚರದಿಂದಿರಬೇಕು. ರಾಜ್ಯದಲ್ಲಿ ಪ್ರಜಾ ಪ್ರಭುತ್ವ ಮರುಸ್ಥಾಪಿಸುವ ತಂತ್ರವನ್ನು ವಿಫಲಗೊಳಿಸಬೇಕು ಎಂದರು.