Sunday, 11th May 2025

ಶಿವಸೇನೆಯ ಬಂಡಾಯ ಶಾಸಕರಿಗೆ ಟಿಎಂಸಿ ಪ್ರತಿಭಟನೆ ’ಬಿಸಿ’

ಗುವಾಹಟಿ: ಶಿವಸೇನೆಯ ಹಿರಿಯ ನಾಯಕ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರು ತಂಗಿರುವ ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್‌ನ ಹೊರಗೆ ತೃಣಮೂಲ ಕಾಂಗ್ರೆಸ್ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದೆ ಎಂದು ವರದಿ ಯಾಗಿದೆ.

ಪ್ರತಿಭಟನೆಯ ನೇತೃತ್ವವನ್ನು ತೃಣಮೂಲ ಕಾಂಗ್ರೆಸ್‌ನ ಅಸ್ಸಾಂ ಮುಖ್ಯಸ್ಥ ರಿಪುನ್ ಬೋರಾ ವಹಿಸಿದ್ದರು.

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರಕಾರ ಉರುಳಿಸಲು, ಶಿವಸೇನೆ ಶಾಸಕರ ಬಂಡಾ ಯವನ್ನು ಸಕ್ರಿಯಗೊಳಿಸಲು ಅಸ್ಸಾಂನ ಆಡಳಿತಾರೂಢ ಬಿಜೆಪಿ ತನ್ನ ಎಲ್ಲಾ ಸಂಪ ನ್ಮೂಲಗಳನ್ನು ಹೂಡಿಕೆ ಮಾಡಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಘೋಷಣೆ ಗಳನ್ನು ಕೂಗಿದರು.

ರಾಜ್ಯದಲ್ಲಿ ಪ್ರವಾಹದಿಂದ ಹಾನಿಗೊಳಗಾದವರ ಸಂಕಷ್ಟಗಳನ್ನು ನಿವಾರಿಸಲು ರಾಜ್ಯ ಸರಕಾರ ಏನೂ ಮಾಡಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.  ಅಸ್ಸಾಂನಲ್ಲಿ ಬ್ರಹ್ಮಪುತ್ರ ಹಾಗೂ ಬರಾಕ್ ನದಿಗಳ ನೀರಿನ ಏರಿಕೆಯಿಂದ ಉಂಟಾದ ಪ್ರವಾಹದಿಂದ 55 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ.