Monday, 12th May 2025

ತಿರುಪತಿ ದೇವಸ್ಥಾನ 8 ತಿಂಗಳು ಬಂದ್

ತಿರುಪತಿ: ವಿಶ್ವಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಬಾಗಿಲು 6ರಿಂದ 8ತಿಂಗಳ ಕಾಲ ಬಂದ್ ಆಗುವ ಸಾಧ್ಯತೆಯಿದ್ದು, ಈ ಬಗ್ಗೆ ತಿರುಮಲ ತಿರುಪತಿ ದೇವಸ್ಥಾನದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ತಿರುಪತಿ ತಿಮ್ಮಪ್ಪ ದೇವಸ್ಥಾನದ ಮೇಲೆ 3ನೇ ಮಹಡಿಯ ಆನಂದ ನಿಲಯಂ ಹೆಸರಿನ 37.8 ಅಡಿ ಎತ್ತರದ ಗೋಪುರವಿದ್ದು, ಇದಕ್ಕೆ ಚಿನ್ನದ ಲೇಪನ ಮಾಡುವ ಹಿನ್ನೆಲೆ ಶ್ರೀ ವೆಂಕಟೇಶ್ವರ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುತ್ತಿದೆ ಎಂದು ಹೇಳಲಾಗಿದೆ.

ಹೀಗಾಗಿ ಭಕ್ತರಿಗೆ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ದೇವಾಲಯದ ಬಳಿ ವೆಂಕಟೇಶ್ವರ ಸ್ವಾಮಿಯ ತದ್ರೂಪಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ದೇವಸ್ಥಾನದ ಗೋಪುರದ ಚಿನ್ನದ ಲೇಪನ ಕಾರ್ಯವು ಫೆಬ್ರವರಿಯಿಂದ ಆರಂಭವಾಗಿ, ಇದರ ಕೆಲಸ ಮುಗಿಯಲು 6 ತಿಂಗಳು ಬೇಕಾಗಬಹುದು ಎನ್ನಲಾಗಿದೆ.

ಚಿನ್ನದ ಲೇಪನ ಕಾರ್ಯ  ಮುಗಿಯುವವರೆಗೆ ತಾತ್ಕಾಲಿಕವಾಗಿ ಮುಖ್ಯದೇಗುಲದ ಪಕ್ಕದಲ್ಲಿಯೇ ಬಾಲಾಲಯಂ ಎನ್ನುವ ತಾತ್ಕಾಲಿಕ ಮಂದಿರ ನಿರ್ಮಿಸಿ ಅದರಲ್ಲಿ ತಿಮ್ಮಪ್ಪನ ವಿಗ್ರಹದ ಪ್ರತಿಕೃತಿ ಇಡಲಾಗುತ್ತದೆ.

Read E-Paper click here