ನವ ದೆಹಲಿ: ವಯಸ್ಸಾಗುವಿಕೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸಂಭವಿಸುವಂತಹ ನೈಸರ್ಗಿಕ ಪ್ರಕ್ರಿಯೆ. ವಯಸ್ಸಾದಂತೆ ದೇಹದ ಅಂಗಗಳು ಕಾರ್ಯ ನಿರ್ವಹಿಸುವುದು ನಿಧಾನವಾಗುತ್ತದೆ. ದುಗುಡ, ಮಾನಸಿಕ ಯೋಚನೆಗಳು ಹೆಚ್ಚಾಗುತ್ತದೆ. ಆದರೆ ನೀವು ಈ ಒಂದು ಅಭ್ಯಾಸವನ್ನು ಅಳವಡಿಸಿಕೊಂಡರೆ ನಿಮ್ಮ ಜೀವನದಲ್ಲಿ ನಿಜವಾಗಿ ಬದಲಾವಣೆ ಉಂಟು ಮಾಡಬಹುದು (Health Tips). ʼಸೋಶಿಯಲ್ ಸೈನ್ಸ್ ಆ್ಯಂಡ್ ಮೆಡಿಸಿನ್ʼನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವೊಂದು ಜೈವಿಕ ವಯಸ್ಸನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಿದೆ.
ಸೋಶಿಯಲ್ ಸೈನ್ಸ್ ಆ್ಯಂಡ್ ಮೆಡಿಸಿನ್‌ನ ರಿಸರ್ಚ್ ಜೈವಿಕ ವಯಸ್ಸನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ವಿವರಿಸಿದೆ. ನೀವು ವಾರಕ್ಕೆ ಕೇವಲ 1 ಗಂಟೆ ಮೀಸಲಿಡುವ ಮೂಲಕ ನಿಮ್ಮ ವಯಸ್ಸನ್ನು ನಿಧಾನಗೊಳಿಸಬಹುದು. ನಿಮ್ಮ ಮಾನಸಿಕ ಆರೋಗ್ಯವನ್ನು ಹೇಗೆ ಹೆಚ್ಚಿಸಬಹುದು ಎನ್ನುವ ಸಲಹೆ ನೀಡಿದೆ.
ಯಾವ ರೀತಿ ಕಾಯ್ದುಕೊಳ್ಳಬಹುದು?
ನಮ್ಮ ದೈಹಿಕ, ಸಾಮಾಜಿಕ ಮತ್ತು ಮಾನಸಿಕ ಸಕಾರಾತ್ಮಕ ಯೋಚನೆಗಳ ಮೂಲಕ ಜೈವಿಕ ವಯಸ್ಸಾಗುವಿಕೆಯನ್ನು ನಿಧಾನಗೊಳಿಸಬಹುದು ಎಂದು ತಜ್ಞರು ಹೇಳುತ್ತಾರೆ. ಹೆಚ್ಚು ದೈಹಿಕವಾಗಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ, ಹೆಚ್ಚು ಸಕ್ರಿಯರಾಗಿದ್ದರೆ ಹೆಚ್ಚು ಸಮಯದವರೆಗೆ ಬದುಕಬಹುದು ಎಂದು ಅಧ್ಯಯನ ತಿಳಿಸಿದೆ. ಕಡಿಮೆ ದೈಹಿಕ ಚಟುವಟಿಕೆ ಮಾಡುವವರು ಅಕಾಲಿಕ ಮರಣಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ವಿವರಿಸಿದ್ದಾರೆ. ಹಾಗಾಗಿ ದೈಹಿಕ ಚಟುವಟಿಕೆಗಳಿಗೆ ಕೇವಲ 1 ಗಂಟೆ ಮೀಸಲಿಟ್ಟರೆ ನಿಮ್ಮ ವಯಸ್ಸು ಆಗುವಿಕೆಯನ್ನು ಕಡಿಮೆ ಮಾಡಬಹುದು.
ನಾವು ಸಾಮಾಜಿಕವಾಗಿ ಹೆಚ್ಚು ಸಂಪರ್ಕ ಇಟ್ಟುಕೊಂಡಾಗ ಅಂದರೆ ಇತರರ ಜತೆ ಹೆಚ್ಚು ಮಾತನಾಡುವುದು, ಸಂವಹನ ಮಾಡುವುದು, ಇತರರ ಜತೆ ಬೆರೆಯುವುದು ಇತ್ಯಾದಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ದಿನವಿಡೀ ನಿಮ್ಮನ್ನು ನೀವು ಸಕ್ರಿಯವಾಗಿಡಿ. ವ್ಯಾಯಾಮಕ್ಕೆ ಸಮಯವನ್ನು ಕಂಡುಕೊಳ್ಳುದರಿಂದ ವಯಸ್ಸಾಗುವಿಕೆಯನ್ನು ನಿಧಾನಗೊಳಿಸಬಹುದು.
ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೆಚ್ಚು ಸಾಮಾಜಿಕ ಸಂಪರ್ಕವನ್ನು ಕಾಪಾಡಿಕೊಳ್ಳಿ. ಮಾನಸಿಕವಾಗಿ ಉತ್ತೇಜಿಸುವಂತಹ ಚಟುವಟಿಕೆಗಳಲ್ಲಿ ಹೆಚ್ಚು ಪಾಲ್ಗೊಳ್ಳಿ. ನೀವು ಸಕಾರಾತ್ಮಕ ಮನಸ್ಥಿತಿಯನ್ನು ಅಳವಡಿಸಿಕೊಳ್ಳುವುದರಿಂದ ವಯಸ್ಸಾಗುವುದನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇದನ್ನು ಓದಿ: Janhvi Kapoor: ಬಾಯ್ ಫ್ರೆಂಡ್ ಜೊತೆ ನಟಿ ಜಾಹ್ನವಿ ಕಪೂರ್ ತಿರುಮಲ ದೇವಸ್ಥಾನಕ್ಕೆ ಭೇಟಿ- ವಿಡಿಯೊ ವೈರಲ್