Monday, 12th May 2025

ಐಎನ್‌ಎಸ್ ರಣವೀರ್‌ನಲ್ಲಿ ಸ್ಫೋಟ: ಮೂವರ ಸಾವು

ನವದೆಹಲಿ: ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ರಣವೀರ್‌ನಲ್ಲಿ ಸಂಭವಿಸಿದ ಸ್ಫೋಟದಿಂದ ಮೂವರು ನೌಕಾ ಸಿಬ್ಬಂದಿ ಮೃತಪಟ್ಟಿದ್ದಾರೆ.

ಇಂದು ಮುಂಬೈನ ನೌಕಾನೆಲೆಯಲ್ಲಿ ಸಂಭವಿಸಿದ ಘಟನೆಯಲ್ಲಿ, ಐಎನ್‌ಎಸ್ ರಣವೀರ್‌ನ ಆಂತರಿಕ ವಿಭಾಗದಲ್ಲಿ ಸ್ಫೋಟದಿಂದ ಉಂಟಾದ ಗಾಯಗಳಿಂದ ಮೂವರು ನೌಕಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

“ಯುದ್ಧನೌಕೆಯ ಕಂಪಾರ್ಟ್​ಮೆಂಟ್​ ಒಂದರಲ್ಲಿ ಸ್ಫೋಟ ಸಂಭವಿಸಿದೆ. ಆದರೆ ನೌಕೆಗೆ ದೊಡ್ಡಮಟ್ಟದಲ್ಲಿ ಹಾನಿಯಾಗಿಲ್ಲ” ಎಂದು ಕೇಂದ್ರ ಪ್ರಕಟಣೆ ವಿವರಿಸಿದೆ.

ಯಾವುದೇ ಶಸ್ತ್ರಾಸ್ತ್ರ ಅಥವಾ ಮದ್ದುಗುಂಡುಗಳಿಂದ ಈ ಸ್ಫೋಟ ಸಂಭವಿಸಿಲ್ಲ. ಸ್ಫೋಟಕ್ಕೆ ಕಾರಣವನ್ನು ತನಿಖೆ ಮಾಡಲು ತನಿಖಾ ಮಂಡಳಿಗೆ ಆದೇಶಿಸ ಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಐಎನ್‌ಎಸ್ ರಣವೀರ್‌ನಲ್ಲಿ ನವೆಂಬರ್ 2021 ರಿಂದ ಪೂರ್ವ ನೌಕಾ ಕಮಾಂಡ್‌ನಿಂದ ಕರಾವಳಿಯ ಕಾರ್ಯಾಚರಣೆಯ ನಿಯೋಜನೆಯಲ್ಲಿತ್ತು ಮತ್ತು ಶೀಘ್ರ ದಲ್ಲೇ ಬೇಸ್ ಪೋರ್ಟ್‌ಗೆ ಮರಳಬೇಕಿತ್ತು.