Wednesday, 14th May 2025

ದಲಿತರ ಅಂತ್ಯಕ್ರಿಯೆಗೆ ತಡೆ ಆರೋಪ: ಮೂವರ ಬಂಧನ

ಗುನಾ: ಮಧ್ಯಪ್ರದೇಶ ರಾಜ್ಯದ ಗುನಾ ಜಿಲ್ಲೆಯ ಸ್ಮಶಾನದಲ್ಲಿ ಎತ್ತರದ ವೇದಿಕೆಯಲ್ಲಿ ದಲಿತರ ಅಂತ್ಯಕ್ರಿಯೆ ಮಾಡುವುದನ್ನು ಕೆಲವರು ತಡೆದ ಆರೋಪಕ್ಕಾಗಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ತೀವ್ರ ವಿರೋಧದ ಬಳಿಕ ದಲಿತರ ವೇದಿಕೆ ಸಮೀಪದ ಜಮೀನಿನಲ್ಲಿ ಕುಟುಂಬಸ್ಥರು ಮೃತಪಟ್ಟವರ ಅಂತ್ಯಕ್ರಿಯೆ ನಡೆಸಿದ್ದಾರೆ.

ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂತ್ಯಕ್ರಿಯೆಗಾಗಿ ಸ್ಮಶಾನದ ವೇದಿಕೆಯನ್ನು ಬಳಸಲು ದಲಿತ ರಿಗೆ ಅನುಮತಿಯಿಲ್ಲ ಎಂದು ವ್ಯಕ್ತಿ ಯೊಬ್ಬರು ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ.

ಸ್ಥಳೀಯ ನಿವಾಸಿ ಕನ್ಹಯ್ಯ ಅಹಿರ್ವಾರ್ (70) ಮೃತಪಟ್ಟಿದ್ದರು. ಕುಟುಂಬ ಸದಸ್ಯರು ಶವವನ್ನು ಸ್ಮಶಾನಕ್ಕೆ ಕೊಂಡೊಯ್ದರು, ಆದರೆ ಗ್ರಾಮದ ಮೂವರು ಸಂಸ್ಕಾರ ವೇದಿಕೆ ಯಲ್ಲಿ ಅಂತಿಮ ವಿವಿಧಾನಗಳನ್ನು ಮಾಡದಂತೆ ತಡೆದರು ಎಂದು ಕುಂಭರಾಜ್ ಪೊಲೀಸ್ ಠಾಣೆ ಪ್ರಭಾರಿ ಸಂಜೀತ್ ಮಾವಾಯಿ ತಿಳಿಸಿದ್ದಾರೆ.