Wednesday, 14th May 2025

ರಾಕೇಶ್ ಟಿಕಾಯತ್’ಗೆ ಬೆದರಿಕೆ: ಅಪರಿಚಿತ ವ್ಯಕ್ತಿ ವಿರುದ್ಧ ದೂರು

ಮುಜಾಫರ್ : ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಸೋಮವಾರ ಮುಜಾಫರ್ ನಗರ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಕರೆ ಮಾಡಿದವನು ತನ್ನನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಟಿಕಾಯತ್ ದೂರಿನಲ್ಲಿ ಆರೋಪಿಸಿದ್ದಾರೆ.

ಟಿಕಾಯತ್ ಚಾಲಕ ಪ್ರವೇಜ್ ತ್ಯಾಗಿ ಮುಜಾಫರ್ ನಗರದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಇನ್ನು ಮುಜಾಫರ್ ನಗರದ ಹಿರಿಯ ಪೊಲೀಸ್ ಅಧೀಕ್ಷಕ ಅಭಿಷೇಕ್ ಯಾದವ್ ದೂರು ಸ್ವೀಕರಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ.

ಪೊಲೀಸ್ ತಂಡವು ಸೋಮವಾರ ರಾಕೇಶ್ ಟಿಕಾಯತ್ ಅವರ ಮನೆಗೆ ಭೇಟಿ ನೀಡಿ ಅವರ ಹೇಳಿಕೆಯನ್ನು ದಾಖಲಿಸಿದೆ. ಅಲ್ಲದೇ ನಾಯಕನನ್ನು ಬೆದರಿಸಲು ಬಳಸಲಾದ ಸಂಖ್ಯೆಯ ಕರೆ ವಿವರಗಳ ದಾಖಲೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.