Wednesday, 14th May 2025

20 ಕೆ.ಜಿ. ಆರ್‌ಡಿಎಕ್ಸ್ ಬಳಸಿ ಪ್ರಧಾನಿ ಮೋದಿ ಹತ್ಯೆಗೆ ಸಂಚು !

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿರುವುದಾಗಿ ಮುಂಬೈನಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಕಚೇರಿಗೆ ಇ-ಮೇಲ್ ಸಂದೇಶ ಬಂದಿದೆ.

ಎನ್ಐಎಗೆ ಇ ಮೇಲ್ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಸಂಸ್ಥೆಗಳು ಇ ಮೇಲ್ ಸಂದೇಶ ಕಳುಹಿಸಿದವರ ಮೂಲ ಪರಿಶೀಲಿಸುತ್ತಿದೆ.

ಸಂದೇಶದಲ್ಲಿ ಮೋದಿ ಹತ್ಯೆಗಾಗಿ 20 ಸ್ಲೀಪರ್ ಸೆಲ್ ಗಳನ್ನು ಆಕ್ಟಿವೇಟ್ ಮಾಡಲಾಗಿದೆ. 20 ಕೆ.ಜಿ. RDX ಬಳಸಿ ಸ್ಫೋಟ ನಡೆಸುವ ಬೆದರಿಕೆ ಒಡ್ಡಲಾಗಿದೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪ್ರಧಾನಿ ಮೋದಿಯನ್ನು ಕೊಲ್ಲಬೇಕು.

ಭಾರತದ 20 ಲಕ್ಷ ಜನರನ್ನು ಕೊಲ್ಲಬೇಕು ಎಂದು ಇ ಮೇಲ್‌ ನಲ್ಲಿ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಎನ್ ಐ ಎ ಅಧಿಕಾರಿಗಳು ಮತ್ತು ಕೇಂದ್ರೀಯ ಭದ್ರತಾ ಸಂಸ್ಥೆಗಳು ತನಿಖೆ ಆರಂಭಿಸಿವೆ.