Wednesday, 14th May 2025

ಮುಖ್ಯಮಂತ್ರಿ ಕೇಜ್ರಿವಾಲ್’ಗೆ ಬೆದರಿಕೆ: ಓರ್ವ ಬಂಧನ

#Arvind Kejrival

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಬಿಜೆಪಿ ನಾಯಕ ತಜಿಂದರ್‌ ಪಾಲ್ ಸಿಂಗ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಮಾರ್ಚ್ 3ರಂದು ನಡೆದ ಪ್ರತಿಭಟನೆಯ ವೇಳೆ ತಜಿಂದರ್‌ ಸಿಂಗ್ ಅವರು ಅರವಿಂದ್ ಕೇಜ್ರಿವಾಲ್‌ಗೆ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ತಜಿಂದರ್‌ ಮಾತನಾಡಿರುವ ಹೇಳಿಕೆ ಮತ್ತು ವಿಡಿಯೊ ಆಧರಿಸಿ ಪೊಲೀಸರು ಕ್ರಮ ಜರುಗಿಸಿದ್ದಾರೆ.

ತೆಜೀಂದರ್ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಸುಳ್ಳು ವದಂತಿಗಳನ್ನು ಹರಡಿ ದ್ದಾರೆ. ಧಾರ್ಮಿಕ ಮತ್ತು ಕೋಮು ದ್ವೇಷ ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಎಎಪಿ ನಾಯಕ ಸನ್ನಿ ಸಿಂಗ್ ದೂರು ನೀಡಿದ್ದರು.

10 ಮಂದಿ ಪಂಜಾಬ್ ಪೊಲೀಸರು ನಮ್ಮ ಮನೆಗೆ ಬಂದಿದ್ದರು. ತಜಿಂದರ್‌ನನ್ನು ಬಂಧಿಸಿ ಕರೆದು ಕೊಂಡು ಹೋಗಿದ್ದಾರೆ’ ಎಂದು ತಂದೆ ಕೃಪಾಲ್ ಸಿಂಗ್ ಬಗ್ಗಾ ಹೇಳಿಕೆ ನೀಡಿದ್ದಾರೆ.