Thursday, 15th May 2025

ಚಳಿ ಕಾಯಿಸಿಕೊಳ್ಳಲು ಬೈಕಿಗೆ ಬೆಂಕಿ ಹಚ್ಚಿದ !

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ವಿಪರೀತ ಚಳಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಬೈಕ್‌ಗೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಂಡ ವಿಚಿತ್ರ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ.

ನಾಗ್ಪುರ ನಗರದ ಯಶೋಧರ ನಗರ ಪ್ರದೇಶದಲ್ಲಿ, ರಾತ್ರಿಯ ಸಮಯದಲ್ಲಿ ಹೆಚ್ಚಿನ ಬೈಕ್‌ಗಳು ನಾಪತ್ತೆ ಯಾಗಿವೆ. ಬೈಕ್‌ಗಳೆಲ್ಲ ಕಳ್ಳತನವಾಗಿರುವ ಶಂಕೆ ಯಿಂದ ವಾಹನ ಸವಾರರು ಸಿದ್ಧಾರ್ಥನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿದ್ದಾರ್ಥನಗರ ಪೊಲೀಸರು ತಂಡವನ್ನು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಚೋಟಾ ಸರ್ಫರಾಜ್ ಹಾಗೂ ಆತನ ನಾಲ್ವರು ಅನುಯಾಯಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಛೋಟಾ ಸರ್ಫರಾಜ್ ಗೆ ಸೇರಿದ ಗ್ಯಾಂಗ್ ನಿಂದ ಕದ್ದ 10 ಬೈಕ್‌ಗಳ ಪೈಕಿ ಒಂಬತ್ತು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ, 10ನೇ ಬೈಕ್ ಬಗ್ಗೆ ಪ್ರಶ್ನಿಸಿದಾಗ ಚಳಿ ತಡೆಯಲು ಬೈಕ್‌ಗೆ ಬೆಂಕಿ ಎಂದು ಸರ್ಫರಾಜ್ ಹೇಳಿದ್ದಾನೆ. ಇದನ್ನು ಕೇಳಿದ ಪೊಲೀಸರು ಶಾಕ್ ಆದರು. ಪೊಲೀಸರು ಛೋಟಾ ಸರ್ಫರಾಜ್ ಗ್ಯಾಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.