Monday, 12th May 2025

ರೂಪಾಯಿ ನೋಟ್​ಗೆ ಬಿರಿಯಾನಿ..!

ಕರೀಂನಗರ: ಉದ್ಯಮಿಯೊಬ್ಬ ಹೊಸ ಹೋಟೆಲ್​ ಆರಂಭಿಸಿದ್ದು, ತನ್ನ ಹೋಟೆಲ್​ ಬಗ್ಗೆ ಜನಕ್ಕೆ ತಿಳಿಯಲೆಂದು ರೂಪಾಯಿ ನೋಟ್​ಗೆ ಒಂದು ಬಿರಿಯಾನಿ ಕೊಡುವುದಾಗಿ ಪ್ರಚಾರ ನಡೆಸಿತ್ತು. ಅನೇಕ ಜನರು ಒಂದು ರೂ. ನೋಟಿನ ಜೊತೆ 100 ರೂಪಾಯಿ ದಂಡ ಕಟ್ಟಿ ಬಂದಿರುವುದು ಬೆಳಕಿಗೆ ಬಂದಿದೆ.

ಕರೀಂನಗರದ ಹೊಟೇಲ್‌ನ ಉದ್ಘಾಟನಾ ಕೊಡುಗೆಯಾಗಿ ಒಂದು ರೂಪಾಯಿಗೆ ಬಿರಿಯಾನಿ ಘೋಷಿಸಿದ್ದು, ಜನಸಾಗರವೇ ಹರಿದು ಬಂದಿತ್ತು. ಹೊಟೇಲ್ ಪ್ರದೇಶದಲ್ಲಿ ನೂರಾರು ವಾಹನಗಳು ನಿಲುಗಡೆ ಮಾಡಿದ್ದರಿಂದ ಸಂಚಾರ ಅಸ್ತವ್ಯಸ್ತ ಗೊಂಡಿದ್ದು, ಉದ್ಘಾಟನೆ ಸಂದರ್ಭದಲ್ಲಿ ಹೋಟೆಲ್ ಮಾಲೀಕರು ಹೊಸ ತಂತ್ರ ಬಳಸಿ ತಮ್ಮ ಹೊಟೇಲ್ ಬಗ್ಗೆ ವಿವಿಧ ರೀತಿಯಲ್ಲಿ ಜಾಹೀರಾತು ನೀಡಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ.

ಒಂದು ರೂಪಾಯಿ ನೋಟು ಕೊಟ್ಟವರಿಗೆ ಬಿರಿಯಾನಿ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡ ಲಾಗಿತ್ತು. ಈ ಪ್ರಚಾರ ವ್ಯಾಪಕವಾಗುತ್ತಿದ್ದಂತೆಯೇ ಒಂದು ರೂಪಾಯಿ ನೋಟುಗಳನ್ನು ಸಂಗ್ರಹಿಸಿ ಗ್ರಾಹಕರು ಹೋಟೆಲ್‌ ಮುಂದೆ ಸರತಿ ಸಾಲಿನಲ್ಲಿ ನಿಂತರು. ಕ್ರಮೇಣ ಜನಸಂದಣಿ ಹೆಚ್ಚಾದಂತೆ ಕೆಲವರು ಹೋಟೆಲ್‌ಗೆ ನುಗ್ಗಲು ಯತ್ನಿಸಿದರು.

ಕೇವಲ ಒಂದು ರೂಪಾಯಿಗೆ ಬಿರಿಯಾನಿ ನೀಡುವುದಾಗಿ ಸರತಿ ಸಾಲಿನಲ್ಲಿ ನಿಂತರೂ ಸಹ ಕೆಲವರು ತಾಳ್ಮೆ ಕಳೆದು ಕೊಂಡು ನೂಕಲು ಯತ್ನಿಸಿದ್ದರು. ಒಂದು ರೂಪಾಯಿಯ ಬಿರಿಯಾನಿ ಪ್ರಚಾರದ ಎಫೆಕ್ಟ್‌ನಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್​ಗೆ ಆಗಮಿಸಲು ಪ್ರಾರಂಭಿಸಿದರು.

ಹೋಟೆಲ್​ ಮಾಲೀಕರ ಈ ಪ್ರಚಾರದಿಂದ ಕೆಲವೇ ಗಂಟೆಗಳಲ್ಲಿ ಸುಮಾರು 800 ಪಾರ್ಸೆಲ್‌ಗಳನ್ನು ಮಾರಾಟ ಮಾಡಿದರು.

ಇನ್ನು ಮಾಡಿದ್ದ ಬಿರಿಯಾನಿ ಎಲ್ಲವೂ ಕೆಲವೇ ಗಂಟೆಗಳಲ್ಲಿ ಖಾಲಿಯಾಗಿದ್ದು, ಗ್ರಾಹಕರಿಗೆ ಬಿರಿಯಾನಿ ಇಲ್ಲ, ಖಾಲಿಯಾಗಿದೆ ಎಂದು ಅಂಗಡಿ ಕೆಲಸಗಾರರು ತಿಳಿಸಿದ್ದಾರೆ.