Sunday, 18th May 2025

ತೀಸ್ತಾ ಸೆಟಲ್ವಾಡ್’ಗೆ ಮಧ್ಯಂತರ ಜಾಮೀನು ಮಂಜೂರು

ನವದೆಹಲಿ: ಗುಜರಾತ್ ಗಲಭೆ ಪ್ರಕರಣ(2002) ಕ್ಕೆ ಸಂಬಂಧಿಸಿ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ತೀಸ್ತಾ ಸೆಟಲ್ವಾಡ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್, ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಕೇಳಿದೆ.

ಸಾಮಾನ್ಯ ಜಾಮೀನು ಅರ್ಜಿಯನ್ನು ಹೈಕೋರ್ಟ್ ಪರಿಗಣಿಸು ವವರೆಗೆ ತನ್ನ ಪಾಸ್‌ಪೋರ್ಟ್ ಅನ್ನು ಒಪ್ಪಿಸುವಂತೆ ತೀಸ್ತಾ ಸೆಟಲ್ವಾಡ್‌ಗೆ ಕೋರ್ಟ್ ಹೇಳಿದೆ.

ತೀಸ್ತಾ ಸೆಟಲ್ವಾಡ್ ಅವರು ಸೆಷನ್ಸ್ ನ್ಯಾಯಾಲಯ ಮತ್ತು ಹೈಕೋರ್ಟ್ ಮಧ್ಯಂತರ ಜಾಮೀನು ನಿರಾಕರಿಸಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಎರಡೂ ಕಡೆಯ ವಾದವನ್ನು ಆಲಿಸಿದ ನಂತರ, ಸುಪ್ರೀಂ ಕೋರ್ಟ್ , ಕಸ್ಟಡಿ ವಿಚಾರಣೆ ಸೇರಿದಂತೆ ತನಿಖೆಯ ಅಗತ್ಯ ಅಂಶಗಳು ಪೂರ್ಣಗೊಂಡ ನಂತರ, ವಿಷಯವು ಒಂದು ಸಂಕೀರ್ಣತೆಯನ್ನು ಪಡೆದುಕೊಳ್ಳುತ್ತದೆ, ಅಲ್ಲಿ ಈ ವಿಷಯವನ್ನು ಹೈಕೋರ್ಟ್ ಪರಿಗಣಿಸುವವರೆಗೆ ಮಧ್ಯಂತರ ಜಾಮೀನಿನ ಪರಿಹಾರವು ಸ್ಪಷ್ಟವಾಗಿ ಕಂಡುಬರುತ್ತದೆ ಎಂದು ಹೇಳಿದೆ

ತೀಸ್ತಾ ಸೆಟಲ್ವಾಡ್ ಅವರು ಗಲಭೆಗಳ ತನಿಖೆಗಾಗಿ ರಚಿಸಲಾದ ನಾನಾವತಿ ಆಯೋಗದ ಮುಂದೆ ಸಾಕ್ಷಿಗಳ ಸುಳ್ಳು ಹೇಳಿಕೆಗಳನ್ನು ರಚನೆ ಮಾಡಿದ್ದಲ್ಲದೆ ಅದನ್ನು ಆಯೋಗಕ್ಕೆ ಸಲ್ಲಿಸಿದ ಆರೋಪ ಹೊತ್ತಿದ್ದಾರೆ.