Monday, 12th May 2025

ತ.ನಾಡು ವಿಧಾನಸಭೆಯಲ್ಲಿ ಸಿಎಎ ವಿರೋಧಿ ನಿರ್ಣಯಕ್ಕೆ ಅಂಗೀಕಾರ

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ನಿರ್ಣಯವನ್ನು ಅಂಗೀಕರಿಸಲಾಗಿದೆ.

ಸಿಎಎ ಸಂವಿಧಾನದ ಜಾತ್ಯಾತೀತ ತತ್ವಗಳಿಗೆ ವಿರೋಧವಾಗಿದೆ. ಹಾಗೂ ದೇಶದಲ್ಲಿ ಧಾರ್ಮಿಕ ಸಾಮರಸ್ಯ ತರಲು ಪೂರಕವಾಗಿಲ್ಲ ಎಂಧು ಹೇಳುವ ಮೂಲಕ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್​ ತಮ್ಮ ನಿರ್ಣಯ ಮಂಡಿಸಿದರು.

ದೇಶದ ಆಡಳಿತವು ಪ್ರಜೆಗಳ ಆಲೋಚನೆ ಹಾಗೂ ಭಾವನೆಗಳನ್ನು ಗೌರವಿಸುವಂತೆ ಇರಬೇಕು ಎಂದು ಪ್ರಜಾ ಪ್ರಭುತ್ವ ಹೇಳುತ್ತದೆ. ಆದರೆ ಕಾಯ್ದೆಯು ನಿರಾಶ್ರಿತ ರಿಗೆ ಆಶ್ರಯ ನೀಡುವ ಬದಲು ಧರ್ಮ ಹಾಗೂ ದೇಶದ ಮೂಲ ಎಂಬ ಹೆಸರಿನಲ್ಲಿ ತಾರತಮ್ಯ ಮಾಡುತ್ತಿದೆ ಎಂದು​ ಹೇಳಿದ್ದಾರೆ.

ಈ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸದನದಲ್ಲಿ ನಿರ್ಣಯ ಅಂಗೀಕರಿಸಿದ ರಾಜ್ಯಗಳ ಸಾಲಿಗೆ ತಮಿಳು ನಾಡು ಕೂಡ ಸೇರ್ಪಡೆಯಾಗಿದೆ. ಈ ಹಿಂದೆ ಪಶ್ಚಿಮ ಬಂಗಾಳ, ಕೇರಳ, ಪಂಜಾಬ್​, ರಾಜಸ್ಥಾನ ಹಾಗೂ ಮಧ್ಯ ಪ್ರದೇಶ(ಪ್ರಸ್ತುತ ಬಿಜೆಪಿ ಆಡಳಿತ) ಸಿಎಎ ವಿರುದ್ಧ ನಿರ್ಣಯವನ್ನು ಅಂಗೀಕರಿಸಿವೆ.

ಸ್ಟಾಲಿನ್​ ಸರ್ಕಾರದ ನಿರ್ಣಯವನ್ನು ಖಂಡಿಸಿ ಬಿಜೆಪಿ ಸದನದಿಂದ ಹೊರನಡೆದಿದೆ. ಸಿಎಎ ಭಾರತೀಯ ಮುಸ್ಲಿಮರ ವಿರುದ್ಧ ಕಾಯ್ದೆಯಲ್ಲ. ನಾವು ಈಗಲೂ ವಿವಿಧತೆಯಲ್ಲಿ ಏಕತೆ ಎಂಬ ಮಾತಿನಲ್ಲಿಯೇ ನಂಬಿಕೆ ಹೊಂದಿದ್ದೇವೆ. ಆದರೆ ಪಾಕ್​ ಸ್ವಾತಂತ್ರ್ಯವನ್ನು ಪಡೆದ ಸಂದರ್ಭದಲ್ಲಿ ಹಿಂದೂಗಳ ಶೇಕಡಾವಾರು ಪ್ರಮಾಣ 20ರಷ್ಟಿದೆ ಆದರೆ ಅದು ಈಗ ಕೇವಲ 3 ಪ್ರತಿಶತವಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *