Wednesday, 14th May 2025

Triple Talaq: ಬಾಸ್ ಜತೆ ಮಲಗಲು ನಿರಾಕರಿಸಿದ ಪತ್ನಿಗೆ ತಲಾಖ್ ನೀಡಿದ ಭೂಪ

Talaq Case

ಮುಂಬೈ: ಬಾಸ್‍ನೊಂದಿಗೆ ಮಲಗಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯೊಬ್ಬ ಪತ್ನಿಗೆ ತ್ರಿವಳಿ ತಲಾಖ್(Talaq Case) ನೀಡಿದ್ದಾನೆ. ಈ ಆರೋಪದ ಮೇಲೆ ಸಾಫ್ಟ್‌ವೇರ್‌ ಎಂಜಿನಿಯರ್ ಆದ ಪತಿಯ ವಿರುದ್ಧ ಮಹಾರಾಷ್ಟ್ರದ ಕಲ್ಯಾಣ್‍ನಲ್ಲಿ ಪ್ರಕರಣ ದಾಖಲಾಗಿದೆ. 45 ವರ್ಷದ ವ್ಯಕ್ತಿಯೊಬ್ಬ ತನ್ನ 28 ವರ್ಷದ ಪತ್ನಿಗೆ ಪಾರ್ಟಿಯಲ್ಲಿ ತನ್ನ ಬಾಸ್‍ನೊಂದಿಗೆ ಮಲಗಲು ಹೇಳಿದಕ್ಕೆ ಆಕೆ ನಿರಾಕರಿಸಿದ್ದಾಳೆ ಎನ್ನಲಾಗಿದೆ(Triple Talaq).

ಇದಾದ ನಂತರ, ಆತ ತನ್ನ ಮೊದಲ ಹೆಂಡತಿಗೆ ನೀಡಲು 15 ಲಕ್ಷ ರೂ.ಗಳನ್ನು ವ್ಯವಸ್ಥೆ ಮಾಡುವಂತೆ ಎರಡನೇ ಪತ್ನಿಯನ್ನು ಕೇಳಿದಾಗ ವಿಚಾರ ಮತ್ತಷ್ಟೂ ಹದಗೆಟ್ಟಿತು. ಆದರೆ ಆತನ ಎರಡನೇ ಹೆಂಡತಿ ನಿರಾಕರಿಸಿದ್ದಾಳೆ. ಆಗ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ. ಇದು 2019 ರಿಂದ ಕ್ರಿಮಿನಲ್ ಅಪರಾಧವಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115 (2), 351 (2), 351 (3) ಮತ್ತು 352 ಮತ್ತು ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮೂಲಗಳ ಪ್ರಕಾರ, ಇವರಿಬ್ಬರುಆರಂಭದಲ್ಲಿ ಚೆನ್ನಾಗೇ ಇದ್ದರು. ಆದರೆ ಮೊದಲ ಪತ್ನಿಗೆ ವಿಚ್ಛೇದನ ನೀಡಲು 15 ಲಕ್ಷ ರೂ.ಗಳ ಅಗತ್ಯವಿದ್ದು, ಎರಡನೇ ಪತ್ನಿಗೆ ಆಕೆಯ ಪೋಷಕರಿಂದ ಹಣ ಪಡೆಯುವಂತೆ ಪೀಡಿಸಿದ್ದಾನೆ. ಇದರ ನಂತರ ಹಣಕ್ಕಾಗಿ ತನ್ನ ಬಾಸ್‍ನೊಂದಿಗೆ ಮಲಗಲು ಹೇಳಿದ್ದಾನೆ. ಇದಕ್ಕೆ ಪತ್ನಿ ನಿರಾಕರಿಸಿದ ನಂತರ ಆತ ತನ್ನ ಎರಡನೇ ಹೆಂಡತಿಗೂ ದೈಹಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ತಕ್ಷಣ ತಲಾಖ್ ನೀಡಿ ನಂತರ ಅವನು ತನ್ನ ಹೆಂಡತಿಯನ್ನು ಮನೆಯಿಂದ ಹೊರಹಾಕಿದ್ದಾನೆ.

ಈ ಸುದ್ದಿಯನ್ನೂ ಓದಿ:ಪುಷ್ಪಾ 2 ಚಿತ್ರದ ‘ಪೀಲಿಂಗ್ಸ್’ ಹಾಡಿಗೆ ಮೊಮ್ಮಗನ ಜೊತೆ ಅಜ್ಜಿಯ ಸಖತ್‌ ಸ್ಟೆಪ್‌- ವಿಡಿಯೊ ಇದೆ

ಈ ಘಟನೆಯ ನಂತರ, ಪತ್ನಿ ಡಿಸೆಂಬರ್ 19 ರಂದು ಪತಿಯ ವಿರುದ್ಧ ಸಂಭಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.  ಮರುದಿನ ಈ ಪ್ರಕರಣವನ್ನು ಕಲ್ಯಾಣ್‍ನ ಬಜಾರ್ಪೇತ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು.