Wednesday, 14th May 2025

ಜಾವೇದ್‌ ಅಖ್ತರ್‌ಗೆ ಸಮನ್ಸ್‌ ಜಾರಿ

ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಾಲಿಬಾನ್‌ ಜತೆ ಹೋಲಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿ ವುಡ್‌ನ ಗೀತಸಾಹಿತಿ ಜಾವೇದ್‌ ಅಖ್ತರ್‌ ಅವರಿಗೆ ಮುಂಬೈ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ.

ಕಳೆದ ವರ್ಷ ಸಂತೋಷ್‌ ದುಬೆ ಎಂಬ ವಕೀಲರು ಜಾವೇದ್‌ ಅಖ್ತರ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 499 (ಮಾನಹಾನಿ), 500 (ಮಾನಹಾನಿಗೆ ಶಿಕ್ಷೆ) ಅಡಿಯಲ್ಲಿ ಮೊಕದ್ದಮೆ ಹೂಡಿದ್ದರು. ಅದರಂತೆ, ನ್ಯಾಯಾಲಯವು ಜಾವೇದ್‌ ಅಖ್ತರ್‌ ಅವರಿಗೆ ಸಮನ್ಸ್‌ ನೀಡಿದೆ. ಫೆಬ್ರವರಿ 6ರಂದು ವಿಚಾರಣೆ ನಡೆಯಲಿದ್ದು, ನ್ಯಾಯಾಲಯಕ್ಕೆ ಅಖ್ತರ್‌ ಹಾಜರಾಗಬೇಕು ಎಂದು ಸೂಚಿಸಿದೆ.

ಟಿವಿ ಸಂದರ್ಶನದಲ್ಲಿ ಜಾವೇದ್‌ ಅಖ್ತರ್‌ ಪ್ರಸ್ತಾಪಿಸಿದ್ದರು. ‘ತಾಲಿಬಾನ್‌ ಹಾಗೂ ಆರ್‌ಎಸ್‌ಎಸ್‌ ಮಧ್ಯೆ ಸಾಮ್ಯತೆ ಇದೆ. ಎರಡೂ ಮೂಲಭೂತವಾದವನ್ನು ಪ್ರತಿಪಾದಿಸುತ್ತವೆ’ ಎಂದು ಹೇಳಿದ್ದರು.