Sunday, 11th May 2025

ಎರಡು ಟಿಪ್ಪರ್ ಟ್ರಕ್‍ಗಳಿಗೆ ಮಾವೋವಾದಿಗಳಿಂದ ಬೆಂಕಿ

ಸುಕ್ಮಾ: ಜಿಲ್ಲೆಯ ಫುಲ್ಬಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಟ್ಟಪಾರಾ ಪ್ರದೇಶದಲ್ಲಿ ನಿರ್ಮಾಣ ಕಾರ್ಯದಲ್ಲಿ ನಿರತ ವಾಗಿದ್ದ ಎರಡು ಟಿಪ್ಪರ್ ಟ್ರಕ್‍ಗಳಿಗೆ ಮಾವೋವಾದಿಗಳು ಬೆಂಕಿ ಹಚ್ಚಿದ್ದಾರೆ.

ನಕ್ಸಲರು ಬೆಂಕಿ ಹಚ್ಚಿ ಪರಾರಿಯಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾ ಮೀಸಲು ಪೊಲೀಸ್ ಪಡೆ ಮೂವರು ಕಾರ್ಮಿಕ ರನ್ನು ರಕ್ಷಿಸಿ ಬಾಗ್ಚಿ ಪೊಲೀಸ್ ಠಾಣೆಗೆ ಕರೆ ತರುವಲ್ಲಿ ಯಶಸ್ವಿಯಾಗಿದೆ.

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ಛತ್ತೀಸ್‍ಗಢ ಸರ್ಕಾರ ಪುನಾ ನಕೋಮ್ ಅಭಿಯಾನ ಆರಂಭಿಸಿದ್ದು, ಕಳೆದ ಶುಕ್ರವಾರ ನಾಲ್ವರು ಮಾವೋವಾದಿಗಳು ಶರಣಾಗಿದ್ದರೂ ಈ ಘಟನೆ ಬೆನ್ನಲ್ಲೆ ಕೆಲ ನಕ್ಸಲರು ರಕ್ತದೊಕುಳಿಗೆ ಮುನ್ನುಡಿ ಬರೆಯಲು ಹೊರಟಿರುವುದು ರಕ್ತಕ್ರಾಂತಿಗೆ ನಾಂದಿ ಹಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.