Sunday, 11th May 2025

ವಿದ್ಯಾರ್ಥಿನಿ ಅತ್ಯಾಚಾರ, ಚಾಲಕ, ಕಂಡಕ್ಟರ್ ಬಂಧನ

ಇಡುಕ್ಕಿ: ಖಾಸಗಿ ಬಸ್​​ವೊಂದರಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಕೇರಳದಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಡಕ್ಟರ್ ಹಾಗೂ ಡ್ರೈವರ್​​​ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಆರೋಪಿಗಳನ್ನು ಅಫ್ಜಲ್ ಹಾಗೂ ಅಬಿನ್​ ಎಂದು ಗುರುತಿಸಲಾಗಿದೆ.

ವಿದ್ಯಾರ್ಥಿನಿ ಪ್ರತಿದಿನ ಶಾಲೆಗೆ ಒಂದೇ ಬಸ್ ನಲ್ಲಿ ತೆರಳುತ್ತಿದ್ದು, ಬಸ್ ಚಾಲಕ ಅಫ್ಜಲ್ ವಿದ್ಯಾರ್ಥಿನಿ ಜೊತೆ ಸಲುಗೆ ಬೆಳಸಿ ಪ್ರೀತಿಯ ನಾಟಕವಾಡಿ ತದ ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಈ ಕೃತ್ಯಕ್ಕೆ ಕಂಡಕ್ಟರ್​​ ಅಬಿನ್ ಸಾಥ್ ನೀಡಿದ್ದಾನೆ.

ಘಟನೆಯ ನಂತರ ವಿದ್ಯಾರ್ಥಿನಿ ಮನೆಗೆ ತೆರಳಿ ಪೋಷಕರಿಗೆ ಮಾಹಿತಿ ನೀಡಿದ್ದು. ಪೊಲೀಸ್ ಠಾಣೆಗೆ ತೆರಳಿ ಪೋಷಕರು ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಇಡುಕ್ಕಿ ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಬಂಧಿತ ಆರೋಪಿಗಳು ಕೇರಳದ ಇಡುಕ್ಕಿ ಜಿಲ್ಲೆಯವರೆಂದು ಪೊಲೀಸರು ತಿಳಿಸಿದ್ದಾರೆ.