Tuesday, 13th May 2025

ದೇಶಾದ್ಯಂತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸರ್ವರ್ ಡೌನ್

ವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸರ್ವರ್ ಸೋಮವಾರ ಭಾರತದಾದ್ಯಂತ ಡೌನ್ ಆಗಿರುವುದು ವರದಿಯಾಗಿದೆ.

ಗ್ರಾಹಕರು ಸಾಮಾಜಿಕ ಮಾಧ್ಯಮಕ್ಕೆ ದೂರು ಹೇಳುತ್ತಿದ್ದಾರೆ. ಎಸ್‌ಬಿಐ, ನೆಟ್ ಬ್ಯಾಂಕಿಂಗ್, ಯುಪಿಐ, ಯೋನೋ ಆಯಪ್ ಸೇರಿದಂತೆ ತನ್ನ ಸೇವೆ ಗಳಲ್ಲಿ ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ.

ಹಲವಾರು ಬಳಕೆದಾರರು ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸಿ ದರು.

‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 9:19 AM IST ರಿಂದ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಬಳಕೆದಾರರ ವರದಿಗಳು ಸೂಚಿಸುತ್ತವೆ.

ಸೋಮವಾರ ಬೆಳಿಗ್ಗೆ ಬಳಕೆದಾರರು ತಮ್ಮ ಖಾತೆಗಳಿಗೆ (ನೆಟ್ ಬ್ಯಾಂಕಿಂಗ್, ಯುಪಿಐ ಪಾವತಿ, ಎಸ್‌ಬಿಐ ವೆಬ್‌ಸೈಟ್) ಲಾಗಿನ್ ಮಾಡುವಾಗ ತೊಂದರೆ ಎದುರಿಸಲು ಪ್ರಾರಂಭಿಸಿದಾಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.