Tuesday, 13th May 2025

ಭಾರೀ ಹಿಮಪಾತ: ಕಾಶ್ಮೀರದಲ್ಲಿ ಜನಜೀವನ ಅಸ್ತವ್ಯಸ್ತ

ಶ್ರೀನಗರ : ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ರಾಷ್ಟ್ರೀಯ ಹೆದ್ದಾರಿಯನ್ನೂ ಮುಚ್ಚಲಾಗಿದೆ. ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಕಣಿವೆಯಲ್ಲಿ ರಸ್ತೆ ಸಂಪರ್ಕ ಮತ್ತು ವಿದ್ಯುತ್ ಮೇಲೆ ಪರಿಣಾಮ ಬೀರಿದೆ. ಹೊಸ ಹಿಮಪಾತವು ಭೂಕುಸಿತಕ್ಕೆ ಕಾರಣವಾದ ನಂತರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ. ವಿಮಾನ ನಿಲ್ದಾಣದಿಂದ ಬರುವ ಮತ್ತು ತೆರಳುವ ಎಲ್ಲಾ ವಿಮಾನಗಳನ್ನು ರದ್ದು ಗೊಳಿಸಲಾಗಿದೆ.

ಸರ್ಕಾರವು ರಸ್ತೆಗಳಿಂದ ಹಿಮವನ್ನು ತೆರವುಗೊಳಿಸುತ್ತಿರುವುದರಿಂದ ಶ್ರೀನಗರದಿಂದ ಇತರ ಜಿಲ್ಲೆಗಳಿಗೆ ಹೋಗುವ ಹೆದ್ದಾರಿಗಳನ್ನು ಮುಚ್ಚಲಾ ಗಿದೆ. ವಿಶೇಷವಾಗಿ ಶ್ರೀನಗರದಲ್ಲಿರುವ ಪ್ರಸರಣ ಮಾರ್ಗಗಳಿಗೆ ಶೇ.60ರಷ್ಟು ಹಾನಿಯಾಗಿದೆ ಎಂದು ವಿದ್ಯುತ್ ಇಲಾಖೆ ತಿಳಿಸಿದೆ.

ಕುಲ್ಗಾಮ್ ಜಿಲ್ಲೆಯ ತಂಗ್ಮಾರ್ಗ್ ಅಹರ್ಬಲ್ ಪ್ರದೇಶದಲ್ಲಿ ಹಿಮಪಾತ ದಿಂದಾಗಿ ಮನೆ ಕುಸಿದು ಬಿದ್ದಾಗ ಆರು ಸದಸ್ಯರ ಕುಟುಂಬವನ್ನು ಆಡಳಿ ತವು ರಕ್ಷಿಸಿದೆ. ಬಳಿಕ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ.