Monday, 12th May 2025

ಕೆ.ಜಿ. ಬೆಳ್ಳಿ ದರ ₹72,698

ನವದೆಹಲಿ: ಹತ್ತು ಗ್ರಾಂ ಚಿನ್ನದ ದರವು ದಾಖಲೆಯ ₹55,000 ಮಟ್ಟವನ್ನು ತಲುಪಿದ್ದು, ಬೆಳ್ಳಿ ದರ ಸಹ ಏರುಗತಿಯಲ್ಲಿದೆ.

10 ಗ್ರಾಂ ಚಿನ್ನದ ಫ್ಯೂಚರ್ಸ್‌ ಶೇಕಡ 1.4ರಷ್ಟು ಏರಿಕೆಯಾಗಿ ₹55,190 ತಲುಪಿದೆ. ಇದ ರೊಂದಿಗೆ ಪ್ರತಿ ಕೆ.ಜಿ. ಬೆಳ್ಳಿ ದರ ಶೇಕಡ 1.8ರಷ್ಟು ಹೆಚ್ಚಳವಾಗಿ ₹72,698 ಮುಟ್ಟಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ 19 ತಿಂಗಳ ಗರಿಷ್ಠ ಮಟ್ಟದಲ್ಲಿದೆ.

ರಷ್ಯಾದಿಂದ ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳುವುದರ ವಿರುದ್ಧ ಅಮೆರಿಕ ನಿರ್ಬಂಧ ಹೇರಿರುವ ಬೆನ್ನಲ್ಲೇ ಹೂಡಿಕೆ ದಾರರು ಚಿನ್ನ ಮತ್ತು ಬೆಳ್ಳಿಯತ್ತ ಮುಖ ಮಾಡಿದ್ದಾರೆ.

ದೇಶದ ಚಿನಿವಾರ ಪೇಟೆಯಲ್ಲಿ ಈ ತಿಂಗಳು 10 ಗ್ರಾಂ ಚಿನ್ನದ ದರ ₹2,850ರಷ್ಟು ಏರಿಕೆ ಯಾಗಿದೆ ಹಾಗೂ ಬೆಳ್ಳಿ ದರವು ಕೆ.ಜಿ.ಗೆ ₹5,500 ಹೆಚ್ಚಳವಾಗಿದೆ.