Monday, 12th May 2025

ಶೋಪಿಯಾನ್ ಜಿಲ್ಲೆಯಲ್ಲಿ ಎನ್ಕೌಂಟರ್‌: ಓರ್ವ ಹತ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳು ನಡೆಸಿದ ಎನ್‍ಕೌಂಟ ರ್‍ನಲ್ಲಿ ಭಯೋತ್ಪಾದಕ ಹತನಾಗಿದ್ದಾನೆ.

ಉಗ್ರರನ್ನು ಕಮ್ರಾನ್ ಭಾಯ್ ಅಲಿಯಾಸ್ ಹನೀಸ್ ಎಂದು ಗುರುತಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಕಪ್ರೆನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುವಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ನಂತರ ನಡೆದ ಎನ್‍ಕೌಂಟರಿನಲ್ಲಿ ಬಯೋತ್ಪಾ ದಕ ಹತನಾಗಿದ್ದಾನೆ ಎಮದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೆ.ಎಂ ಭಯೋತ್ಪಾದಕ ಸಂಘಟನೆಯ ಸದಸ್ಯ ಕುಲ್ಗಾಮ-ಶೋಪಿಯಾನ್ ಪ್ರದೇಶದಲ್ಲಿ ಈತ ಸಕ್ರಿಯವಾಗಿದ್ದ ಎಂದು ಗೊತ್ತಾಗಿದೆ. ಈತ ಪಾಕ್ ಮುಲದವನಿರಬೇಕು ಎಂದು ಶಂಕಿಸಲಾಗಿದೆ.