Monday, 12th May 2025

ಪಟಾಕಿ ಅಂಗಡಿಯಲ್ಲಿ ಬೆಂಕಿ: ಇಬ್ಬರ ಸಾವು, ಮತ್ತಿಬ್ಬರಿಗೆ ಗಾಯ

ಮರಾವತಿ: ವಿಜಯವಾಡ ನಗರದಲ್ಲಿ ಪಟಾಕಿ ಅಂಗಡಿಯಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.

ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಜಿಮ್ಖಾನಾ ಮೈದಾನದಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ. 19 ಅಂಗಡಿಗಳ ಪೈಕಿ ಮೂರು ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿ ಸಿದ್ದು, ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದ್ದಾರೆ.

ಅಂಗಡಿಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಈ ಪೈಕಿ ಒಂದು ಅಂಗಡಿ ಯಲ್ಲಿ ಕಾರ್ಮಿಕರು ಮಲಗಿದ್ದರು ಎಂದು ಪೊಲೀ ಸರು ತಿಳಿಸಿದ್ದಾರೆ.

ತಿರುಪತಿ ಜಿಲ್ಲೆಯ ವಡಮಲಪೇಟಾದಲ್ಲಿ ಪಟಾಕಿ ದುರಂತ ಸಂಭವಿಸಿದ್ದು, ₹16 ರಿಂದ ₹18 ಲಕ್ಷ ಮೌಲ್ಯದ ಪಟಾಕಿಗಳು ನಾಶ ವಾಗಿವೆ.