Wednesday, 14th May 2025

Shocking News : ಪಿಕ್‌ಪಾಕೆಟ್ ಮಾಡಿದ ಬಾಲಕರನ್ನು ಕಟ್ಟಿ ಹಾಕಿ ಮೆರವಣಿಗೆ ನಡೆಸಿದ ಗ್ರಾಮಸ್ಥರು, ಕೇಸ್ ದಾಖಲು

Shocking News

ಛತ್ತರ್‌ಪುರ: ಜೇಬುಗಳ್ಳರು ಮತ್ತು ಕಳ್ಳರು ಎಂದು ಶಂಕಿಸಲಾದ ಮೂವರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಕಟ್ಟಿ ಹಾಕಿ ಮೆರವಣಿಗೆ ನಡೆಸಿದ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಹರ್‌ಪಾಲ್‌ಪುರದಲ್ಲಿ (Shocking News) ನಡೆದಿದೆ. ಭಾನುವಾರ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿ ತನಿಖೆಗೆ ಆದೇಶಿಸಿರುವುದಾಗಿ ಹೇಳಿದ್ದಾರೆ. ಅಪ್ರಾಪ್ತ ವಯಸ್ಕರನ್ನು ಮೆರವಣಿಗಗೆ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ವೀಡಿಯೊದಲ್ಲಿ ಮೂವರು ಮಕ್ಕಳನ್ನು ಹಗ್ಗದಿಂದ ಕಟ್ಟಿ ಮೆರವಣಿಗೆ ಮಾಡುತ್ತಿರುವುದನ್ನು ಕಾಣಬಹುದು. ಜನಸಮೂಹವು ಅವರನ್ನು ಹೀಯಾಳಿಸಿಕೊಂಡು ಹಿಂಬಾಲಿಸುತ್ತಿರುವುದು ಕೂಡ ವಿಡಿಯೊದಲ್ಲಿ ದಾಖಲಾಗಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 55 ಕಿಲೋಮೀಟರ್ ದೂರದಲ್ಲಿರುವ ಓಲ್ಡ್ ಗಲ್ಲಾ ಮಂಡಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಫ್ಯಾಷನ್​ ಈವೆಂಟ್​ನಲ್ಲಿ ಗಮನ ಸೆಳೆದ ದಿಶಾ ಪಟಾನಿ, ಸಾರಾ ಅಲಿ ಖಾನ್​ ಮತ್ತು ಆದಿತ್ಯ ರಾಯ್​ ಕಪೂರ್

ಧರ್ಮೇಂದ್ರ ರಜಪೂತ್ ಎಂಬವರ ದೂರಿನ ಮೇರೆಗೆ ಮೂವರು ಅಪ್ರಾಪ್ತರ ವಿರುದ್ಧ ಕಳ್ಳತನದ ಪ್ರಕರಣ ದಾಖಲಿಸಲಾಗಿದೆ. ಬಳಿಕ ಅವರೆಲ್ಲರೂ ಸೇರಿ ಕಟ್ಟಿಹಾಕಿ ಮೆರವಣಿಗೆ ಮಾಡುತ್ತಿದ್ದಾರೆ ಎಂದು ಹರ್ಪಾಲ್ಪುರ ಪೊಲೀಸ್ ಠಾಣೆಯ ಉಸ್ತುವಾರಿ ಪುಷ್ಪಕ್ ಶರ್ಮಾ ಹೇಳಿದ್ದಾರೆ.

ನಿವಾಸಿಗಳ ಪ್ರಕಾರ ಈ ಪ್ರದೇಶವು ಇತ್ತೀಚೆಗೆ ಮೊಬೈಲ್ ಫೋನ್‌ ಸೇರಿದಂತೆ ಜೇಬುಗಳ್ಳತನ ಮತ್ತು ಸಣ್ಣಪುಟ್ಟ ಕಳ್ಳತನಗಳಿಗೆ ಹೆಸರುವಾಸಿಯಾಗಿದೆ . ಮೂವರು ಅಪ್ರಾಪ್ತ ವಯಸ್ಕರನ್ನು ಇಂದು ಬೆಳಿಗ್ಗೆ ಹಿಡಿದು, ಕಟ್ಟಿಹಾಕಿ ಪೊಲೀಸ್ ಠಾಣೆಗೆ ಮೆರವಣಿಗೆ ಮಾಡಲಾಗಿದೆ ಎಂದು ಈ ನಿವಾಸಿಗಳು ಹೇಳಿದ್ದಾರೆ.