Monday, 12th May 2025

ಶಿಮ್ಲಾ ಬಳಿ ಮೇಘಸ್ಫೋಟ: 3 ಸಾವು, 50 ಜನರು ಕಾಣೆ

ಶಿಮ್ಲಾ: ಶಿಮ್ಲಾ ಬಳಿ ಗುರುವಾರ ಸಂಭವಿಸಿದ ಮೇಘಸ್ಫೋಟ ಘಟನೆಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು, ಮತ್ತು 50 ಜನರು ಕಾಣೆಯಾಗಿದ್ದಾರೆ.

ಕೇರಳದಲ್ಲಿ ನಡೆದ ಭೀಕರ ಭೂ ಕುಸಿತದ ಬೆನ್ನಲ್ಲೇ ಶಿಮ್ಲಾದಲ್ಲೂ ಪ್ರಕೃತಿ ಮುನಿಸಿಕೊಂಡಿದೆ. ರಾಯ್ಪುರ ಪ್ರದೇಶದ ಸಮೇಜ್ನಲ್ಲಿ ಈ ಘಟನೆ ನಡೆದಿದೆ.

ಪೊಲೀಸ್ ಮತ್ತು ಆಡಳಿತದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಎಸ್ಡಿಆರ್‌ಎಫ್, ಎನ್ಡಿಆರ್‌ಎಫ್ ಮತ್ತು ಸ್ಥಳೀಯ ಪೊಲೀಸರ ತಂಡಗಳನ್ನು ಈಗಾಗಲೇ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಶಿಮ್ಲಾ ಜಿಲ್ಲಾಧಿಕಾರಿ ಅನುಪಮ್ ಕಶ್ಯಪ್ ಹೇಳಿದರು.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಶಿಮ್ಲಾ ಜಿಲ್ಲೆಯ ರಾಂಪುರ ಪ್ರದೇಶದ ಸಮೇಜ್ ಖಾಡ್ನಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು, ಅಲ್ಲಿ ಮೇಘಸ್ಫೋಟದ ನಂತರ 50 ಕ್ಕೂ ಹೆಚ್ಚು ಜನರು ಕಾಣೆ ಯಾಗಿದ್ದಾರೆ ಮತ್ತು ಇಲ್ಲಿಯವರೆಗೆ 2 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *