Thursday, 15th May 2025

ಮಕ್ಕಳಾಗದ ಬೇಸರದಿಂದ ಆಕೆ ನೀಚ ಕೆಲಸ ಮಾಡಿದಳು !

ಹೈದರಾಬಾದ್​: ಹೈದರಾಬಾದ್​ನಲ್ಲಿದ್ದ ಕುಟುಂಬ ಮೊಹಮ್ಮದ್ ಈತಶಾಮುದ್ದೀನ್ (32) ಮತ್ತು ಶುಜಾದ್ದೀನ್(27) ಹೆಸರಿನ ಅಣ್ಣ ತಮ್ಮ ಇಬ್ಬರೂ ಒಂದೇ ಕಟ್ಟಡದಲ್ಲಿ ಜೀವನ ನಡೆಸುತ್ತಿದ್ದರು. ಈತಶಾಮುದ್ದೀನ್​ಗೆ ಮದುವೆ ಯಾಗಿ ಮೂರು ವರ್ಷದ ಮಗುವಿತ್ತು. ಶುಜಾದ್ದೀನ್​ಗೆ ಒಂದು ವರ್ಷದ ಹಿಂದೆ ಐಶಾ(22) ಳೊಂದಿಗೆ ಮದುವೆಯಾಗಿತ್ತು.

ಮದುವೆಯಾಗಿ ಒಂದು ವರ್ಷವಾದರೂ ಐಶಾಗೆ ಗರ್ಭ ನಿಂತಿರಲಿಲ್ಲ. ಅದರಿಂದ ಸಾಕಷ್ಟು ನೊಂದಿದ್ದಳಂತೆ. ಶುಜಾದ್ದೀನ್​ಗೆ ಅಣ್ಣನ ಮಗಳೆಂದರೆ ಎಲ್ಲಿಲ್ಲದ ಪ್ರೀತಿ. ಪ್ರತಿನಿತ್ಯ ಆಕೆಯೊಂದಿಗೆ ಆಟವಾಡುತ್ತಿರುತ್ತಿದ್ದನಂತೆ. ಪ್ರೀತಿಯಿಂದ ಮುದ್ದಾಡುತ್ತಿದ್ದ ನಂತೆ. ಆದರೆ ಐಶಾ ಇನ್ನಷ್ಟು ಕುಗ್ಗಲಾರಂಭಿಸಿದ್ದಾಳೆ. ತಾನಿನ್ನೂ ತಾಯಿ ಆಗಿಲ್ಲ ಎನ್ನುವ ನೋವು ಹೆಚ್ಚಾಗಲಾರಂಭಿಸಿದೆ.

ಇತ್ತೀಚೆಗೆ ಒಂದು ದಿನ ಅವರ ಬಾವನ ಮಗನನ್ನು ಕರೆದಿದ್ದಾಳೆ. ಅವಳ ಕೈಗಳನ್ನು ಕಟ್ಟಿ, ಎರಡನೇ ಮಹಡಿಯಿಂದ ಕೆಳಗೆ ದೂಡಿದ್ದಾಳೆ.

Leave a Reply

Your email address will not be published. Required fields are marked *