ಥೈಲ್ಯಾಂಡ್: ಆರಾಮಾಗಿ ಬೀಚ್‌ನಲ್ಲಿ ಈಜಾಡುತ್ತಿದ್ದ ಮಹಿಳೆ ವೇಳೆ ದೈತ್ಯ ಶಾರ್ಕ್‌ವೊಂದು ಏಕಾಏಕಿ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ರಜಾ ದಿನಗಳನ್ನು ಕಳೆಯಲೆಂದು ಥೈಲ್ಯಾಂಡ್‌ನ ಫಾಂಗ್ ಎನ್ಗಾನಲ್ಲಿರುವ ಹೋಟೆಲ್‌ಗೆ ಬಂದಿದ್ದ ಜರ್ಮನ್ ಪ್ರವಾಸಿ ಎಲ್ಕೆ ಮೈಯರ್ ಮೇಲೆ ಶಾರ್ಕ್‌ವೊಂದು(Shark Attack) ದಾಳಿ ನಡೆಸಿದೆ. ಇವರು ಇಲ್ಲಿಯ ಖಾವೊ ಲಾಕ್ ಬೀಚ್‌ನಲ್ಲಿ ಈಜುತ್ತಿರುವಾಗ ಸಡನ್ನಾಗಿ ಶಾರ್ಕ್ ದಾಳಿ ಮಾಡಿದೆ. ಇದರಿಂದ ಇವರ ಎಡಗಾಲಿಗೆ ಪೆಟ್ಟಾಗಿದ್ದು, ಇವರನ್ನು ಸಮೀಪವಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತಂತೆ. ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೈಯರ್ ತಮ್ಮ ರಜಾದಿನವನ್ನು ಕಳೆಯಲು ಬೀಚ್‌ಗೆ ಬಂದಿದ್ದರು. ಬೀಚ್‌ನಲ್ಲಿ ಖುಷಿಯಿಂದ ಕಾಲ ಕಳೆಯುತ್ತಿದ್ದ ಈ ದುರ್ಘಟನೆ ಸಂಭವಿಸಿದೆ. ಈವರ ಎಡಗಾಲಿಗೆ ಶಾರ್ಕ್ ಬಾಯಿ ಹಾಕಿದ್ದು ಸುಮಾರು 12 ಇಂಚಿನಷ್ಟು ಆಳವಾದ ಗಾಯವಾಗಿದ್ದು ಶಾರ್ಕ್‌ನ ಹಲ್ಲುಗಳ ಗುರುತು ಸಹ ಇದೆಯಂತೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸುಮಾರು 5 ಅಡಿ ಉದ್ದದ ಶಾರ್ಕ್ ದಾಳಿಯ ನಂತರ ಆಳವಾದ ನೀರಿನಲ್ಲಿ ಹೋಗಿತ್ತಂತೆ.
A 57-year-old female German tourist was reportedly bitten by a suspected shark while swimming in Khuek Khak, Phang Nga, Thailand. Authorities have issued warnings, placed red flags on beaches, and are boosting safety measures, including lifeguard services, to protect visitors. pic.twitter.com/3VTPb7qbCD
— PR Thai Government (@prdthailand) November 29, 2024
ಮೈಯರ್ ಅವರು ಶಾರ್ಕ್‌ನಿಂದ ಪಾರಾಗಿ ದಡವನ್ನು ತಲುಪಿದಾಗ ಅವರ ಕಾಲಿನಲ್ಲಿ ರಕ್ತಸೋರಿದೆ. ಇದನ್ನು ಕಂಡ ಅವರು ಸಹಾಯಕ್ಕಾಗಿ ಕಿರುಚಿದ್ದಾರೆ. ಇನ್ನು ಇವರು ಬೀಚ್‌ನಲ್ಲಿ ಆಟವಾಡಲು ಹೋದ ಸ್ಥಳ ತುಂಬಾ ಆಳ ಕೂಡ ಇರಲಿಲ್ಲ. ಸುರಕ್ಷಿತವಾದ ಸ್ಥಳವಾಗಿತ್ತು ಎಂದು ಲೈಫ್ ಗಾರ್ಡ್ ಅತಿತ್ ಪಿನ್ಯೊ ತಿಳಿಸಿದ್ದಾರೆ.
ಥಾಯ್ ನೀರಿನಲ್ಲಿ ಶಾರ್ಕ್‌ಗಳ ಬಗ್ಗೆ ವ್ಯಾಪಕವಾಗಿ ಅಧ್ಯಯನ ಮಾಡಿರುವ ಸಾಗರ ಪರಿಸರ ವ್ಯವಸ್ಥೆಯ ತಜ್ಞ ಥೋನ್ ತಾಮ್ರಂಗ್ನಾವಾವತ್, ಜರ್ಮನ್ ಪ್ರವಾಸಿ ಮೈಯರ್ ಮೇಲಿನ ದಾಳಿಯು ಬುಲ್ ಶಾರ್ಕ್‌ನಿಂದ ಸಂಭವಿಸಿದೆ ಎಂದು ಹೇಳಿದ್ದಾರೆ. ಥೋನ್ ಪ್ರಕಾರ, “ಶಾರ್ಕ್ ಸಮುದ್ರದ ತಳದಲ್ಲಿ ಚಲಿಸುವಾಗ ಮೇಯರ್ ಅವರ ಕಾಲುಗಳನ್ನು ಬೇಟೆ ಎಂದು ತಪ್ಪಾಗಿ ಭಾವಿಸಿ ಕಚ್ಚಿದೆ. ಕೊನೆಗೆ ಇದು ಅರಿವಾಗಿ ಅವರನ್ನು ಬಿಟ್ಟಿರಬೇಕು ಎಂದು ಹೇಳಿದ್ದಾರೆ. ಶಾರ್ಕ್‌ನ ಈ ನಡವಳಿಕೆಯು ಮನುಷ್ಯನನ್ನು ಬೇಟೆಯಾಡುವ ಉದ್ದೇಶವನ್ನು ಹೊಂದಿರಲಿಲ್ಲ ಆದರೆ ತಪ್ಪು ತಿಳುವಳಿಕೆಯಿಂದ ವರ್ತಿಸಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಕೊರಿಯನ್ ಪತಿ-ಇಂಡಿಯನ್ ಪತ್ನಿ…ಇವರಿಬ್ಬರ ಕ್ಯೂಟ್ ಸಂಭಾಷಣೆ ನೋಡಿದ್ರೆ ನಗು ತಡೆಯೋಕ್ಕಾಗಲ್ಲಾ! ವಿಡಿಯೊ ಇದೆ
“ಅಧಿಕಾರಿಗಳು ಈ ಕುರಿತು ಎಚ್ಚರಿಕೆಗಳನ್ನು ನೀಡಿದ್ದಾರೆ, ಕಡಲತೀರಗಳಲ್ಲಿ ಕೆಂಪು ಧ್ವಜಗಳನ್ನು ಇರಿಸಿದ್ದಾರೆ ಮತ್ತು ಸಂದರ್ಶಕರನ್ನು ರಕ್ಷಿಸಲು ಜೀವರಕ್ಷಕ ಸೇವೆಗಳು ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುತ್ತಿದ್ದಾರೆ” ಎಂದು ಥಾಯ್ ಸರ್ಕಾರ ತಿಳಿಸಿದೆ.