Sunday, 11th May 2025

ಜ-ಕಾಶ್ಮೀರ: ಶಾರದಾ ದೇವಿ ದೇವಾಲಯದಲ್ಲಿ ಮೊದಲ ಬಾರಿ ದೀಪಾವಳಿ ಆಚರಣೆ

ಶ್ರೀನಗರ: ಕಳೆದ 75 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿರುವ ಶಾರದಾ ದೇವಿ ದೇವಾಲಯದಲ್ಲಿ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ.

ಉಗ್ರರ ಉಪಟಳ ಹಾಗೂ ಮೂಲಭೂತವಾದಿಗಳ ಉದ್ಧಟತನದಿಂದಾಗಿ 1948ರಿಂದ ಶಾರದಾ ದೇವಿ ದೇವಾಲಯದಲ್ಲಿ ದೀಪಾವಳಿ ಹಬ್ಬದ ಸಂಭ್ರಮವೇ ಕಮರಿ ಹೋಗಿತ್ತು. ಆದರೆ, ಶಾರದಾ ದೇವಿ ಮಂದಿರದಲ್ಲಿ ದೀಪ ಬೆಳಗಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ದೀಪಾವಳಿ ಆಚರಣೆ ಮಾಡಲಾಗಿದೆ. ‘1948ರ ಬಳಿಕ ಇದೇ ಮೊದಲ ಬಾರಿಗೆ ಶಾರದಾ ದೇವಿ ಮಂದಿರದಲ್ಲಿ ದೀಪಾವಳಿ ಆಚರಣೆ ಮಾಡಲಾಗಿದೆ’ ಎಂದು ಸೇವ್‌ ಶಾರದಾ ಕಮಿಟಿ ಮುಖ್ಯಸ್ಥ ರವೀಂದರ್‌ ಪಂಡಿತ್‌ ಮಾಹಿತಿ ನೀಡಿದ್ದಾರೆ. ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿ ಶಾರದಾ ದೇವಿ ದೇವಾಲಯ ಇದೆ.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಗಡಿಯಲ್ಲಿ ಯೋಧರ ಜತೆ ದೀಪಾವಳಿ ಆಚರಿಸಿದ್ದಾರೆ.

Leave a Reply

Your email address will not be published. Required fields are marked *