Sunday, 11th May 2025

ಪಡಿತರ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿ..!

ವದೆಹಲಿ: ಪಡಿತರ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ನೀಡುವಂತೆ ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟ ಕೇಂದ್ರ ಸರಕಾರಕ್ಕೆ ಹೀಗೊಂದು ಪತ್ರ ಬರೆದಿದೆ ಎನ್ನಲಾಗಿದೆ.

ಅಖಿಲ ಭಾರತ ನ್ಯಾಯಬೆಲೆ ಅಂಗಡಿ ಡೀಲರ್ಸ್ ಫೆಡರೇಶನ್ ಈ ಪತ್ರ ನೀಡಿದ್ದು, ಅವರ ಬೇಡಿಕೆಗಳನ್ನು ತರ್ಕಬದ್ಧವಾಗಿ ಪರಿಗಣಿಸುವ ಸಲುವಾಗಿ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿಸ್ವಂಭರ್ ಬಸು ಅವರು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್, ಕೇಂದ್ರ ಹಣಕಾಸು ಕಾರ್ಯದರ್ಶಿ, ಕೇಂದ್ರ ಕಂದಾಯ ಕಾರ್ಯದರ್ಶಿ, ಕೇಂದ್ರ ಗ್ರಾಹಕ ರಕ್ಷಣೆ ಮತ್ತು ಆಹಾರ ಸಚಿವಾಲಯದ ರಾಜ್ಯ ಸಚಿವರಿಗೆ ಪತ್ರದ ಪ್ರತಿಯನ್ನು ಕಳುಹಿಸಿದ್ದಾರೆ.

ಪಡಿತರ ಅಂಗಡಿಗಳನ್ನು ಉಳಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಪಡಿತರ ವಿತರಕರು ಪ್ರತಿಪಾದಿಸಿದ್ದಾರೆ. ರಾಜ್ಯ ಸರಕಾರಗಳೂ ಮುಂದೆ ಬರಬೇಕು. ಹೀಗಾಗಿ ಪಡಿತರ ಅಂಗಡಿಗಳಿಂದ ಪರವಾನಗಿ ಪಡೆದ ಮದ್ಯ ಮಾರಾಟ ಮಾಡುವಂತೆ ಕೇಂದ್ರ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಫೆಡರೇಶನ್ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಸರಕಾರದಿಂದ ಅನುಮೋದಿತ ವಾಗಿರುವ ಪಡಿತರ ಅಂಗಡಿಗಳ ಸಂಖ್ಯೆ 5ಲಕ್ಷ 37 ಸಾವಿರದ 868. ಸುಮಾರು ಎರಡೂವರೆ ಕೋಟಿ ಜನರು ಈ ಅಂಗಡಿಗಳೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದಾರೆ. ಪ್ರಸ್ತುತ ಮೂಲಸೌಕರ್ಯದಲ್ಲಿ ಪಡಿತರ ವ್ಯವಸ್ಥೆ ನಡೆಯುತ್ತಿರುವ ರೀತಿಯಲ್ಲಿ ಪಡಿತರ ವಿತರಕರು ಲಾಭವನ್ನು ಕಾಣುತ್ತಿಲ್ಲ ಎಂದು ವಿತರಕರು ಹೇಳಿದ್ದಾರೆ.