Thursday, 15th May 2025

Sara Tendulkar: ಗೋವಾ ಬೀಚ್‍ನಲ್ಲಿ ಬಿಕಿನಿಯಲ್ಲಿ ಮಿಂಚಿದ ಸಾರಾ ತೆಂಡೂಲ್ಕರ್! ವಿಡಿಯೊ ಇದೆ

Sara Tendulkar

ಮುಂಬೈ: ಸಚಿನ್ ತೆಂಡುಲ್ಕರ್ ಮಗಳು ಸಾರಾ ತೆಂಡುಲ್ಕರ್‌ ಅಪತ್ರಿಮ ಸುಂದರಿ. ಇವರ ವಿಶೇಷವಾದ  ಫ್ಯಾಷನ್ ಪ್ರಜ್ಞೆಯಿಂದ ಸಾಕಷ್ಟು ಅಭಿಮಾನಿಗಳ ಬಳಗವನ್ನೂ ಹೊಂದಿದ್ದಾರೆ. ಈಗ ಸಾರಾ ತೆಂಡುಲ್ಕರ್‌ ಸುದ್ದಿಯಲ್ಲಿದ್ದಾರೆ. ಗೋವಾ ಬೀಚ್‌ನಲ್ಲಿ ಬಿಕಿನಿಯಲ್ಲಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡ ಸಾರಾ ಅವರ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. 

ಗೋವಾವೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಯಾವುದೇ ನಿರ್ಬಂಧಗಳಿಲ್ಲದೇ ಬೀಚ್‌ನಲ್ಲಿ ಕಾಲ ಕಳೆಯಬಹುದು ಎಂದು ಸೆಲೆಬ್ರಿಟಿಗಳು, ಅವರ ಮಕ್ಕಳು ಗೋವಾವನ್ನು ಆಯ್ಕೆ ಮಾಡುತ್ತಾರೆ. ಸಾರಾ ತೆಂಡೂಲ್ಕರ್ ಕೂಡ ಇದರಿಂದ ಹೊರತಾಗಿಲ್ಲ.

ಸಾರಾ ತೆಂಡೂಲ್ಕರ್‌ ಇತ್ತೀಚೆಗೆ 27ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಜೊತೆಗೆ ವಾರಾಂತ್ಯವನ್ನು ಗೋವಾದ ಕಡಲತೀರದಲ್ಲಿ ಸಖತ್‌ ಹಾಟ್‌ ಆಗಿ ಕಳೆದಿದ್ದಾರೆ. ಬಿಕಿನಿ ಧರಿಸಿ “ಬೀಚ್‍ನಲ್ಲಿ ಒಂದು ದಿನ” ಎಂಬ ಶೀರ್ಷಿಕೆಯೊಂದಿಗೆ ಅವರು ಬೀಚ್‍ನಲ್ಲಿ ಖುಷಿಪಟ್ಟ ಸರಣಿ ಪೋಟೊಗಳನ್ನು ತಮ್ಮ ಇನ್‍ಸ್ಟಾಗ್ರಾಂ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ.

Sara Tendulkar

ನೀಲಿ ಬಣ್ಣದ ಬಿಕಿನಿಯಲ್ಲಿ ಸಾರಾ ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಗೇ  ಅವರ ಮುಖದ ಕಾಂತಿ ಕೂಡ ತುಂಬಾ ಗ್ಲೋ ಆಗಿ ಕಾಣಿಸಿದೆ. ಇದು ಅನೇಕರ ಗಮನವನ್ನು ಸೆಳೆದಿದೆ. ಹಾಗಾಗಿ ಅವರ ಪೋಸ್ಟ್‌ಗೆ ಸಾಕಷ್ಟು ಲೈಕ್‌ಗಳೂ ಮತ್ತು ಕಾಮೆಂಟ್‍ಗಳು  ಬಂದಿವೆ.

Sara Tendulkar

ಇದನ್ನೂ ಓದಿ: ಮಲಯಾಳಂ ನಟ ಬಾಲಾ ಮನೆಗೆ ಮಧ್ಯರಾತ್ರಿ ನುಗ್ಗಲು ಯತ್ನಿಸಿದ ಮಹಿಳೆ; ನಟ ಕೊಟ್ಟ ಉತ್ತರವೇನು?

ಗೋವಾ ಬೀಚ್‍ನಲ್ಲಿ ಸಾರಾ ಅವರು ತಮ್ಮ ಸ್ನೇಹಿತರ ಜೊತೆ ಸೇರಿ ಸಖತ್ ಎಂಜಾಯ್ ಮಾಡಿದ್ದಾರೆ. ಬೀಚ್‌ನಲ್ಲಿ ಕುಣಿದಾಡಿದ್ದಾರೆ. ಸಾರಾ ಬಿಕಿನಿ ಪೋಟೊಗೆ ಅನೇಕರು ಕಾಮೆಂಟ್ ಮಾಡಿದ್ದು,  ಸಾರಾ ತೆಂಡುಲ್ಕರ್‌ ಮತ್ಸ್ಯ ಕನ್ಯೆ ರೀತಿ ಕಾಣುತ್ತಿದ್ದಾರೆ  ಎಂದು ಬರೆದಿದ್ದಾರೆ. ಇನ್ನೂ ಕೆಲವರು ನಿಮ್ಮ ಸ್ಕಿನ್‌ ಇಷ್ಟು ಗ್ಲೋ ಆಗಲು  ಕಾರಣವೇನು ಎಂದು ಪ್ರಶ್ನಿಸಿದ್ದಾರೆ!