Wednesday, 14th May 2025

Sapna Choudhary: ಸಪ್ನಾ ಚೌಧರಿ ‘ಥೆಕೆ ಆಲಿ ಗಲಿ’ ಮೋಹಕ ನೃತ್ಯಕ್ಕೆ ಅಭಿಮಾನಿಗಳು ಫಿದಾ! ವಿಡಿಯೊ ಇದೆ

Sapna Choudhary

ನೃತ್ಯಗಾರ್ತಿ ಸಪ್ನಾ ಚೌಧರಿ(Sapna Choudhary) ತಮ್ಮ ನೃತ್ಯದ ಮೂಲಕ ಸಾಕಷ್ಟು ಜನರ ಮನಸ್ಸು ಗೆದ್ದಿದ್ದಾರೆ. ಸಪ್ನಾ ಅವರು ವೇದಿಕೆಯ ಮೇಲೆ ಬಂದ ತಕ್ಷಣ ಅವರ ಅಭಿಮಾನಿಗಳ ಎದೆಯಲ್ಲಿ ಮಿಂಚಿನ ಸಂಚಾರವಾಗುತ್ತದೆ. ಇವರು ವೇದಿಕೆಯಲ್ಲಿ ನೃತ್ಯ ಮಾಡುವುದು ಕಡಿಮೆಯಾದರೂ ಕೂಡ ಅವರ ಹಳೆಯ ನೃತ್ಯದ ವಿಡಿಯೊ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಇತ್ತೀಚೆಗೆ, ಅವರ ಹಳೆಯ ಹಾಡು, ‘ಥೆಕೆ ಆಲಿ ಗಲಿ’ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದೆ.  ಸಪ್ನಾ ಅವರ ಈ ಹಾಡು ಕೋಟಿ ವೀಕ್ಷಣೆಗಳನ್ನು ಗಳಿಸಿದೆ.

ಸಪ್ನಾ ಚೌಧರಿ ‘ಥೆಕೆ ಆಲಿ ಗಲಿ’ ಹಾಡಿನಲ್ಲಿ ಪಟಿಯಾಲ ಸಲ್ವಾರ್ ಸೂಟ್ ಧರಿಸಿ ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ಅವರ ವಿಶಿಷ್ಟ ಹೆಜ್ಜೆಗಳು ಮತ್ತು ಸುಂದರವಾದ ಅಭಿನಯ ಪ್ರೇಕ್ಷಕರ ಹೃದಯವನ್ನು ಗೆದ್ದಿವೆ. ಈ ಹಾಡು ಇಲ್ಲಿಯವರೆಗೆ 73,637,766 ವೀಕ್ಷಣೆಗಳನ್ನು ಪಡೆದಿದೆಯಂತೆ.

ಈ ವಿಡಿಯೊದಲ್ಲಿ, ಸಪ್ನಾ ಚೌಧರಿ ಅವರ ನೃತ್ಯ ಪ್ರದರ್ಶನವನ್ನು ನೋಡಲು  ಅಪಾರ ಜನಸಮೂಹ ಜಮಾಯಿಸಿತ್ತು. ಅವರ ಅಭಿಮಾನಿಗಳು ಅವರ ನೃತ್ಯವನ್ನು ಆನಂದಿಸುವುದು ಮಾತ್ರವಲ್ಲದೆ ಅವರ ನೃತ್ಯವನ್ನು ಮೊಬೈಲ್‍ನಲ್ಲಿ ವಿಡಿಯೊ ರೆಕಾರ್ಡ್‌ ಕೂಡ ಮಾಡಿದ್ದಾರಂತೆ.  ಈ ವಿಡಿಯೊ ಹಳೆಯದಾಗಿರಬಹುದು, ಆದರೆ ಇಂದಿಗೂ, ಲಕ್ಷಾಂತರ ಜನರು ಅದನ್ನು ಪದೇ ಪದೇ ನೋಡಲು ಇಷ್ಟಪಡುತ್ತಾರೆ.

ಬಿಗ್ ಬಾಸ್ 11 ರಲ್ಲಿ ಭಾಗವಹಿಸುವ ಮೂಲಕ ಸಪ್ನಾ ಚೌಧರಿ ರಾಷ್ಟ್ರವ್ಯಾಪಿ ತಮ್ಮ ಛಾಪು ಮೂಡಿಸಿದ್ದರು. ಅವರು ಈ ಶೋನಲ್ಲಿ ಗೆಲುವು ಸಾಧಿಸದಿದ್ದರೂ ಕೂಡ  ಇದರಿಂದ ಅವರು ಮಹತ್ವದ ಮೈಲಿಗಲ್ಲನ್ನು ಸಾಧಿಸಿದರು. ಇದರ ನಂತರ, ಸಪ್ನಾ ಬಾಲಿವುಡ್‍ಗೆ  ಪ್ರವೇಶಿಸಿ ಅನೇಕ ಭಾಷೆಗಳಲ್ಲಿ ಮ್ಯೂಸಿಕ್‍ ವಿಡಿಯೊಗಳನ್ನು ಮಾಡಿದ್ದಾರೆ. 2018 ರಲ್ಲಿ, ಸಪ್ನಾ ಚೌಧರಿ ಹೆಚ್ಚು ಹುಡುಕಲ್ಪಟ್ಟ ಭಾರತದ ಟಾಪ್ 3 ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದರು. ಇದು ಅವರ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.

ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ, ಸಪ್ನಾ ಚೌಧರಿ ಆಗಾಗ್ಗೆ ಸಲ್ವಾರ್ ಕಮೀಜ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಯಾವಾಗಲೂ ತಮ್ಮ ಮನಮೋಹಕ ಪೋಟೊಗಳು  ಮತ್ತು ಫೋಟೋಶೂಟ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಮತ್ತು  ಅದು ಬಹಳ ವೇಗವಾಗಿ ವೈರಲ್ ಕೂಡ ಆಗುತ್ತದೆ.

ಇದನ್ನೂ ಓದಿ:ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ʻಸಪ್ನಾʼ ಸುಂದರಿ! ಈಕೆಯ ಸಖತ್‌ ಡಾನ್ಸ್‌ಗೆ ಮರುಳಾಗದವರುಂಟೆ?

ಹರಿಯಾಣದ ಸಣ್ಣ ಹಳ್ಳಿಯಿಂದ ಬಂದ ಸಪ್ನಾ ಚೌಧರಿ ಬಿಗ್ ಬಾಸ್ ಮತ್ತು ಬಾಲಿವುಡ್‍ ಮೂಲಕ ಪ್ರಯಾಣವನ್ನು ಮಾಡಿದ್ದಾರೆ. ಅವರ ನೃತ್ಯ ಪ್ರದರ್ಶನಗಳು ಎಷ್ಟು ಹಿಟ್ ಆಗಿವೆಯೆಂದರೆ, ಕೆಲವೊಮ್ಮೆ ಬಾಲಿವುಡ್ ತಾರೆಯರು ಸಹ ಅವರ ಮುಂದೆ ಮಸುಕಾದಂತೆ ಕಾಣುತ್ತಾರೆ. ಸಪ್ನಾ ಅವರ ಈ ಕಥೆ ತಮ್ಮ ಕನಸುಗಳನ್ನು ನನಸಾಗಿಸಲು ಬಯಸುವ ಪ್ರತಿಯೊಬ್ಬ ವ್ಯಕ್ತಿಗೆ ಸ್ಫೂರ್ತಿ ನೀಡುತ್ತದೆ.