Wednesday, 14th May 2025

Sapna Choudhary:”ಬದ್ಲಿ ಬದ್ಲಿ ಲಗೆ” ಹಾಡಿಗೆ ಸಖತ್‌ ಆಗಿ ಹೆಜ್ಜೆ ಹಾಕಿದ ಸಪ್ನಾ ಚೌಧರಿ; ವಿಡಿಯೊ ನೋಡಿ

Sapna Choudhary

ನವದೆಹಲಿ: ಸಪ್ನಾ ಚೌಧರಿ(Sapna Choudhary) ಅವರ ಹೆಸರನ್ನು ಕೇಳಿದಾಗ ಅವರ ನೃತ್ಯದ ಝಲಕ್‌ ಕಣ್ಮುಂದೆ ಬರುತ್ತದೆ.ಈಗಾಗಲೇ ಇವರ ನೃತ್ಯದ ತುಣುಕಿನ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿವೆ. ಈಗ ಅವರ “ಬದ್ಲಿ ಬದ್ಲಿ ಲಗೆ” ಹಾಡಿಗೆ ನೃತ್ಯ ಮಾಡಿದ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡಿದೆ

ಈ ವಿಡಿಯೊದಲ್ಲಿ ಅವರು  ಅರ್ಧ ಗಂಟೆಯ ನೃತ್ಯ ಪ್ರದರ್ಶನ ಮಾಡಿದ್ದಾರೆ. ಈ ವಿಡಿಯೊದಲ್ಲಿ ಸಪ್ನಾ ವೇದಿಕೆಯ ಮೇಲಿಂದ ಜನರನ್ನು ಹೇಗೆ ಮೋಡಿ ಮಾಡಿದ್ದಾರೆ ಎಂಬುದನ್ನು ನೋಡಬಹುದು. ‘ಹರ್ಯಾನ್ವಿ ಮೇನಿಯಾ’ ಯೂಟ್ಯೂಬ್ ಚಾನೆಲ್‍ನಲ್ಲಿನ ಈ ವಿಡಿಯೊ ಪ್ರೇಕ್ಷಕರನ್ನು ಹುಚ್ಚರನ್ನಾಗಿ ಮಾಡಿದೆ.

ಡಿಸೆಂಬರ್ 2016 ರಲ್ಲಿ ದೆಹಲಿಯ ನಂಗ್ಲೋಯಿಯಲ್ಲಿ ನಡೆದ ರಾಗಿಣಿ ಸ್ಪರ್ಧೆಯಲ್ಲಿ, ಸಪ್ನಾ ಚೌಧರಿ ತಮ್ಮ ಅದ್ಭುತ ಅಭಿನಯದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಈ ಕಾರ್ಯಕ್ರಮವು ‘ಕುವಾನ್ ಪೂಜಾನ್’ ಸಂದರ್ಭದಲ್ಲಿ ನಡೆಯಿತು ಮತ್ತು ಅದರ ವಿಡಿಯೊವನ್ನು ನವೆಂಬರ್ 4 ರಂದು ‘ಹರ್ಯಾನ್ವಿ ಮೇನಿಯಾ’ ಚಾನೆಲ್‍ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ, ಸಪ್ನಾ ಕೆಂಪು ಮತ್ತು ನೀಲಿ ಸಲ್ವಾರ್ ಸೂಟ್ ಧರಿಸಿ ವೇದಿಕೆಯ ಮೇಲೆ ಹೆಜ್ಜೆ ಹಾಕಿದ್ದಾರೆ, ಮತ್ತು  ಪ್ರೇಕ್ಷಕರು ಅವರನ್ನು ಚಪ್ಪಾಳೆಯೊಂದಿಗೆ ಹುರಿದುಂಬಿಸಿದ್ದಾರೆ. ಮತ್ತು ‘ಇಂಗ್ಲಿಷ್ ಮೀಡಿಯಂ’, ‘ಸುತ್ರಿ ಸೆ ತು’ ಮತ್ತು ‘ತು ಚೀಸ್ ಲಜಾವಾಬ್’ ನಂತಹ ಸೂಪರ್‌ಹಿಟ್‌ ಹರ್ಯಾನ್ವಿ ಹಾಡುಗಳಲ್ಲಿ ಅವರು  ಅದ್ಭುತವಾಗಿ ನೃತ್ಯ ಮಾಡಿದ್ದು, ಈ ನೃತ್ಯವು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಸಪ್ನಾ ಚೌಧರಿ ಅವರ ಜನಪ್ರಿಯತೆ ಹರಿಯಾಣಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರನ್ನು ಉತ್ತರ ಭಾರತದಾದ್ಯಂತ  ಜನರು ಇಷ್ಟಪಡುತ್ತಾರೆ. ಅವರ ಆಕರ್ಷಕ ನೃತ್ಯ ಶೈಲಿಯು ಲಕ್ಷಾಂತರ ಜನರನ್ನು ಅವರ ಕಡೆಗೆ ಸೆಳೆಯುವಂತೆ ಮಾಡುತ್ತದೆ.  ಹಾಗಾಗಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾವಿರಾರು ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ. ಮತ್ತು ಅವರೆಲ್ಲರೂ ಅವರ  ಪ್ರತಿ ಹೊಸ ನೃತ್ಯ ವಿಡಿಯೊಗಾಗಿ ಕುತೂಹಲದಿಂದ ಕಾಯುತ್ತಿರುತ್ತಾರೆ.

ಈ ಸುದ್ದಿಯನ್ನೂ ಓದಿ:’ಯೇ ರಾತೇ ಯೇ ಮೌಸಮ್’ ಹಾಡಿಗೆ ಬಾಲಕಿಯ ಕ್ಯೂಟ್‌ ಅಭಿನಯ; ಫಿದಾ ಆದ ನೆಟ್ಟಿಗರು: ವಿಡಿಯೊ ನೋಡಿ

ಸಪ್ನಾ ಚೌಧರಿ ಅವರ ನೃತ್ಯ ಶೈಲಿ ತುಂಬಾ ವಿಶಿಷ್ಟವಾಗಿದೆ. ಅವರ ಹೆಜ್ಜೆಗಳು, ಅವರ  ಸೌಂದರ್ಯ ಅದ್ಭುತವಾದ  ಪ್ರದರ್ಶನವನ್ನು ಸ್ಮರಣೀಯವಾಗಿಸುತ್ತದೆ. ಈ ವಿಡಿಯೊದಲ್ಲಿ, ಅವರು 30 ನಿಮಿಷಗಳ ಕಾಲ ಯಾವುದೇ ಆಯಾಸವಿಲ್ಲದೇ ವೇದಿಕೆಯ ಮೇಲೆ ಹೆಜ್ಜೆ ಹಾಕಿದ್ದಾರೆ. ಅವರ ಈ ಉತ್ಸಾಹವು ಅವರನ್ನು ಹರಿಯಾಣದ ಅತ್ಯಂತ ಪ್ರಸಿದ್ಧ ನೃತ್ಯಗಾರ್ತಿಯನ್ನಾಗಿ ಮಾಡಿದೆ.