Wednesday, 14th May 2025

Sapna Choudhary: ರಸ್ಗುಲ್ಲಾ ಖಾವಡೆ ಮನ್ನೆ ಯಾರ್‌‌ಗೆ ಹರ್ಯಾನ್ವಿ ಡ್ಯಾನ್ಸರ್ ಸಪ್ನಾ ಚೌಧರಿ ಭರ್ಜರಿ ಸ್ಟೆಪ್; ಅಭಿಮಾನಿಗಳು ಫಿದಾ

Sapna Choudhary

ಯೂಟ್ಯೂಬರ್ (Youtuber) ಸಪ್ನಾ ಚೌಧರಿ (Sapna Choudhary) ಅವರು ರಸ್ಗುಲ್ಲಾ ಖಾವಡೆ ಮನ್ನೆ ಯಾರ್.. ಹಾಡಿಗೆ (Rasgulla Khavade Manne Yaar) ಭರ್ಜರಿ ಸ್ಟೆಪ್ ಹಾಕಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಇವರ ಈ ಹಾಡಿನ ವಿಡಿಯೋ ವೈರಲ್ (Viral Video) ಆಗಿದ್ದು, ಯೂಟ್ಯೂಬ್ ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.

ಅದ್ಭುತ ನೃತ್ಯ ಭಂಗಿ ಮತ್ತು ಶಕ್ತಿಯುತ ಅಭಿವ್ಯಕ್ತಿಗಾಗಿ ರಾಷ್ಟ್ರವ್ಯಾಪಿ ಪ್ರಸಿದ್ಧರಾಗಿರುವ ಸಪ್ನಾ ಅವರ ಹಳೆಯ ವಿಡಿಯೋಗಳು ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಇದರಲ್ಲಿ ರಸ್ಗುಲ್ಲಾ ಖಾವಡೆ ಮನ್ನೆ ಯಾರ್.. ಕೂಡ ಸೇರಿದೆ. ಇದರಲ್ಲಿ ಕಿತ್ತಳೆ ಸೂಟ್ಸ್ ಧರಿಸಿ ಅವರು ಲಕ್ಷಾಂತರ ಮಂದಿಯ ಮನ ಗೆದ್ದಿದ್ದಾರೆ.

ಹರ್ಯಾನ್ವಿ ಸಂಗೀತ ವಲಯದಲ್ಲಿ ಸಪ್ನಾ ಚೌಧರಿ ಹೆಸರು ಅಗ್ರಸ್ಥಾನದಲ್ಲಿದೆ. ಇವರ ಡ್ಯಾನ್ಸ್ ಮತ್ತು ಹಾಡುಗಳ ಕ್ರೇಜ್ ಎಷ್ಟಿದೆಯೆಂದರೆ ಪ್ರತಿ ಹೊಸ ವಿಡಿಯೋ ಬಿಡುಗಡೆಯಾದ ತಕ್ಷಣ ವೈರಲ್ ಆಗುತ್ತಿದೆ.

ರಸ್ಗುಲ್ಲ ಖಾವಡೆ ಮನ್ನೆ ಯಾರ್.. ಹಾಡಿನ ಟ್ಯೂನ್ ಮತ್ತು ಸಪ್ನಾ ಚೌಧರಿ ಅವರ ನೃತ್ಯದ ಸಂಯೋಜನೆಯು ಅಭಿಮಾನಿಗಳ ಹೃದಯವನ್ನು ಗೆದ್ದಿದೆ.

Rishab Pant: ಆಕ್ಸಿಡೆಂಟ್‌ನಲ್ಲಿ ತನ್ನ ಜೀವ ಉಳಿಸಿದವರಿಗೆ ರಿಷಬ್ ಪಂತ್ ನೀಡಿದ ಕೊಡುಗೆ ನೋಡಿ!

ಸಪ್ನಾ ಅವರ ನೃತ್ಯದ ವಿಶೇಷತೆ ಎಂದರೆ ಅವರ ಶಕ್ತಿಯ ಮಟ್ಟ ಮತ್ತು ಪ್ರೇಕ್ಷಕರನ್ನು ಸೆಳೆಯುವ ಕಲೆ. ಸಪ್ನಾ ಚೌಧರಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ. ಸಾಕಷ್ಟು ಮಂದಿ ಅವರ ನೃತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಸಾಕಷ್ಟು ಮಂದಿ ಪ್ರೀತಿಯ ಸಂದೇಶಗಳನ್ನೂ ಕಳುಹಿಸಿದ್ದಾರೆ.