Wednesday, 14th May 2025

Sapna Chaudhary: ‘ಕಿಡ್ನಾಪ್ ಹೋ ಜಾವೇಗಿ’ ಹಾಡಿಗೆ ಭರ್ಜರಿ ಸ್ಟೆಪ್‌ ಹಾಕಿದ ಸಪ್ನಾ ಚೌಧರಿ; ಅಭಿಮಾನಿಗಳ ದಿಲ್‌ ಖುಷ್!

Sapna Chaudhary

ಹೊಸದಿಲ್ಲಿ: ನೃತ್ಯಗಾರ್ತಿ ಸಪ್ನಾ ಚೌಧರಿ (Sapna Chaudhary) ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಸಪ್ನಾ ಚೌಧರಿ ರೆಡ್ ಹಾಟ್ ಪಟಿಯಾಲಾ ಡ್ಯಾನ್ಸ್ ‘ಕಿಡ್ನಾಪ್ ಹೋ ಜಾವೇಗಿ’ ಯೂಟ್ಯೂಬ್‍ನಲ್ಲಿ ಸಖತ್‍ ಟ್ರೆಂಡ್ ಆಗುತ್ತಿದೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನೃತ್ಯಗಾರ್ತಿಯ ಕುಣಿತಕ್ಕೆ ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ.

ಸಪ್ನಾ ಚೌಧರಿ‌ ಹೆಸರು ಕೇಳುತ್ತಲೆ ಕಿವಿ ನಿಮಿರುತ್ತದೆ. ಯಾಕೆಂದರೆ ಅವರ ನೃತ್ಯದ ಲಯವೇ ಹಾಗಿದೆ. ಅಭಿಮಾನಿಗಳಂತೂ ಇವರ ನೃತ್ಯಕ್ಕೆ ಫಿದಾ ಆಗಿಬಿಟ್ಟಿದ್ದಾರೆ. ಹೀಗಾಗಿ ಸೋಶಿಯಲ್‌ ಮೀಡಿಯಾದಲ್ಲಿ ಇತ್ತೀಚೆಗೆ ಸಪ್ನಾ ಚೌಧರಿ ಅವರ ʼಕಿಡ್ನಾಪ್ ಹೋ ಜಾವೇಗಿ ನೃತ್ಯದ ವಿಡಿಯೊ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಇನ್ನು ವೇದಿಕೆಯ ಮೇಲೆ ಸಪ್ನಾ ಚೌಧರಿ ನರ್ತಿಸುತ್ತಿದ್ದರೆ, ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಇವರ ನೃತ್ಯಕ್ಕೆ ಮನಸೋಲದವರೇ ಇಲ್ಲವೆನ್ನಬೇಕೆನೋ. ನೃತ್ಯದ ವಿಡಿಯೊಗಳು  ಈಗ ಸೋಶಿಯಲ್ ಮೀಡಿಯಾದಲ್ಲಿ ಜನರಿಂದ ಅತಿ ಹೆಚ್ಚು ಲೈಕ್ ಗಳಿಸುತ್ತಿದೆ.

ʼಕಿಡ್ನಾಪ್ ಹೋ ಜಾಯೇಗಿʼ ಎಂಬ ಹರ್ಯಾನ್ವಿ ಹಾಡಿಗೆ ಸಪ್ನಾ ಚೌಧರಿ ಅವರು ಅದ್ಭುತವಾಗಿ ಸ್ಟೆಪ್ಸ್‌ ಹಾಕಿದ್ದಾರೆ. ಇದು ಯೂಟ್ಯೂಬ್‍ನಲ್ಲಿ ಟ್ರೆಂಡಿಂಗ್‍ನಲ್ಲಿದೆ. ತನ್ನ ಕಠಿಣ ಪರಿಶ್ರಮದಿಂದ, ಸಪ್ನಾ ಚೌಧರಿ ದೊಡ್ಡ ಹೆಸರನ್ನು ಗಳಿಸಿದ್ದಾರೆ. ಸಪ್ನಾ ಚೌಧರಿ ಅವರ ನೃತ್ಯ ಚಲನೆಗಳು ಭಾರತ ಮತ್ತು ವಿದೇಶಗಳಲ್ಲಿ ಪ್ರಸಿದ್ಧವಾಗಿವೆ.

ಈ ಸುದ್ದಿಯನ್ನೂ ಓದಿ: ವಿಸಿ ಕಚೇರಿಯ ಮುಂದೆ ಡ್ಯಾನ್ಸ್‌ ಮಾಡಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು; ಕಾರಣವೇನು?

ಸಪ್ನಾ ಚೌಧರಿ ಅವರ ಜೀವನದ ಬಗ್ಗೆ ಹೇಳುವುದಾದರೆ, ಅವರು ಹರಿಯಾಣದ ರೋಹ್ಟಕ್‌ನಲ್ಲಿ ತಮ್ಮ ವಿದ್ಯಾಭ್ಯಾಸ ಪೂರೈಸಿದ್ದಾರೆ. ಮೊದಲ ಕಾರ್ಯಕ್ರಮಕ್ಕೆ ಸಪ್ನಾ ಚೌಧರಿ ಹಣ ಪಡೆದಿರಲಿಲ್ಲ. ಆದರೆ ಇದಾದ ಅನಂತರ ಪ್ರತಿ ಕಾರ್ಯಕ್ರಮಕ್ಕೆ 3,100 ರೂ. ಪಡೆದಿದ್ದರಂತೆ. ತಮ್ಮ ಆದಾಯದಿಂದ ಮನೆಯನ್ನು ನಡೆಸುತ್ತಿದ್ದ ಅವರು ಆಗ ವರ್ಷಕ್ಕೆ 30ರಿಂದ 35 ಕಾರ್ಯಕ್ರಮಗಳನ್ನು ನೀಡುತ್ತಿದ್ದರಂತೆ.