Tuesday, 13th May 2025

‘ಸಂಕಲ್ಪ ಸಪ್ತಾಹ್’- ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೆಹಲಿಯ ಭಾರತ ಮಂಟಪ ದಲ್ಲಿ ‘ಸಂಕಲ್ಪ ಸಪ್ತಾಹ್’ ಎಂಬ ದೇಶದ ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಿಗಾಗಿ ಒಂದು ವಾರದ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ಸಂಕಲ್ಪ್ ಸಪ್ತಾಹ್’ ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮದ (ABP) ಪರಿಣಾಮ ಕಾರಿ ಅನುಷ್ಠಾನಕ್ಕೆ ಸಂಬಂಧಿಸಿದೆ.

ಈ ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಪ್ರಧಾನಿಯವರು ಜನವರಿ 7, 2023 ರಂದು ಪ್ರಾರಂಭಿಸಿದರು. ಇದು ನಾಗರಿಕರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಬ್ಲಾಕ್ ಮಟ್ಟದಲ್ಲಿ ಆಡಳಿತವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

ದೇಶದ 329 ಜಿಲ್ಲೆಗಳಲ್ಲಿ 500 ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಲ್ಲಿ ಇದನ್ನು ಜಾರಿಗೊಳಿಸ ಲಾಗುತ್ತಿದೆ. ಮಹತ್ವಾಕಾಂಕ್ಷೆಯ ಬ್ಲಾಕ್‌ ಗಳ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ಮತ್ತು ಪರಿಣಾಮಕಾರಿ ಬ್ಲಾಕ್ ಅಭಿವೃದ್ಧಿ ಕಾರ್ಯತಂತ್ರವನ್ನು ತಯಾರಿಸಲು, ದೇಶಾ ದ್ಯಂತ ಗ್ರಾಮ ಮತ್ತು ಬ್ಲಾಕ್ ಮಟ್ಟದಲ್ಲಿ ಚಿಂತನ ಶಿಬಿರಗಳನ್ನು ಆಯೋಜಿಸ ಲಾಗಿದೆ.

‘ಸಂಕಲ್ಪ ಸಪ್ತಾಹ’ ಈ ಚಿಂತನ ಶಿಬಿರಗಳ ಪರಾಕಾಷ್ಠೆಯಾಗಿದೆ. 500 ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಲ್ಲಿ ‘ಸಂಕಲ್ಪ್ ಸಪ್ತಾಹ್’ ಅನ್ನು ಆಚರಿಸಲಾಗುತ್ತದೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 9, 2023 ರವರೆಗೆ ‘ಸಂಕಲ್ಪ್ ಸಪ್ತಾಹ್’ ನಲ್ಲಿ ಪ್ರತಿ ದಿನವು ಒಂದು ನಿರ್ದಿಷ್ಟ ಅಭಿವೃದ್ಧಿ ಥೀಮ್‌ಗೆ ಮೀಸಲಾಗಿರುತ್ತದೆ. ಮೊದಲ ಆರು ದಿನಗಳ ಥೀಮ್‌ಗಳಲ್ಲಿ ‘ಸಂಪೂರ್ಣ ಸ್ವಾಸ್ಥ್ಯ’, ‘ಸುಪೋಷಿತ್ ಪರಿವಾರ’, ‘ಸ್ವಚ್ಛತಾ’, ‘ಕೃಷಿ’, ‘ಶಿಕ್ಷಾ’ ಮತ್ತು ‘ಸಮೃದ್ಧಿ ದಿವಸ್’ ಸೇರಿವೆ.

Leave a Reply

Your email address will not be published. Required fields are marked *