Monday, 12th May 2025

ಸಂಜಯ್ ರಾವತ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

ಮುಂಬೈ: ಮುಖ್ಯಮಂತ್ರಿ ಶಿಂಧೆ ಪುತ್ರನಿಂದ ನನಗೆ ಜೀವ ಬೆದರಿಕೆ ಇದೆ ಎಂದು ಸುಳ್ಳು ಆರೋಪ ಮಾಡಿದ್ದಕ್ಕಾಗಿ ಶಿವಸೇನಾ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.

ರಾವತ್ ವಿರುದ್ಧ ಥಾಣೆ ಮಾಜಿ ಮೇಯರ್ ಆಗಿರುವ ಮೀನಾಕ್ಷಿ ಶಿಂಧೆ ಅವರು ದೂರು ನೀಡಿದ ನಂತರ ಪ್ರಕರಣ ದಾಖಲು ಮಾಡಲಾಗಿದೆ.

ರಾವುತ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಮಾನನಷ್ಟ, ಸುಳ್ಳು ಆರೋಪ, ದ್ವೇಷ ವನ್ನು ಉತ್ತೇಜಿಸುವುದು, ಶಾಂತಿ ಭಂಗಕ್ಕಾಗಿ ಅವಮಾನ ಮತ್ತು ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆಗಳ ಆರೋಪ ಹೊರಿಸ ಲಾಗಿದೆ.

ಸಂಸದರಾಗಿರುವ ಶ್ರೀಕಾಂತ್ ಶಿಂಧೆ ಅವರು ಥಾಣೆ ಮೂಲದ ರಾಜಾ ಠಾಕೂರ್ ಎಂಬುವ ರನ್ನ ಕೊಲ್ಲಲು ಗುತ್ತಿಗೆ ನೀಡಿದ್ದರು ಎಂದು ರಾವತ್ ವಾರದ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು.

ಥಾಣೆ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಅವರು, ದೂರಿನ ಪ್ರತಿಯನ್ನು ಗೃಹ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಕಳುಹಿಸಿದ್ದರು ಈ ಬೆಳವಣಿಗೆ ಬೆನ್ನಲ್ಲೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರಾವತ್ ಹೇಳಿಕೆಯ ಬಗ್ಗೆ ತನಿಖೆ ನಡೆಸುವ ಭರವಸೆ ನೀಡಿದ್ದರು.

ಜನರ ಸಹಾನೂಭೂತಿ ಪಡೆಯುವ ಉದ್ದೇಶದಿಂದ ರಾವತ್ ಅವರು ಬುದ್ಧಿಹೀನ ಆರೋಪಗಳನ್ನು ಮಾಡುತ್ತಿದ್ದಾರೆ. ನಿಮ್ಮ ಸುಳ್ಳು ಆರೋಪಗಳಿಂದ ನೀವು ಜನರ ಮನಸು ಗೆಲ್ಲಲು ಸಾಧ್ಯವಿಲ್ಲ ಎಂದು ಫಡ್ನವಿಸ್ ಆರೋಪ ನಿರಾಕರಿಸಿದ್ದರು.