Tuesday, 13th May 2025

ಸಂಸತ್‌ ಉಭಯ ಸದನಗಳ ಕಲಾಪ ವೀಕ್ಷಣೆಗೆ ’ಸಂಸದ್ ಟಿವಿ’ ಅಸ್ವಿತ್ವಕ್ಕೆ

ನವದೆಹಲಿ: ರಾಜ್ಯಸಭಾ ಟಿವಿ ಹಾಗೂ ಲೋಕಸಭಾ ಟಿವಿ ಒಗ್ಗೂಡಿಸಲಾಗಿದ್ದು “ಸಂಸದ್ ಟಿವಿ” ಹೆಸರಿನ ನೂತನ ವಾಹಿನಿ ಉದಯಿಸಿದೆ.

ಈ ವಾಹಿನಿಯಲ್ಲಿ ಲೋಕಸಭೆ ಕಲಾಪಗಳು ಹಿಂದಿಯಲ್ಲಿಯೂ ರಾಜ್ಯಸಭೆ ಕಲಾಪಗಳು ಆಂಗ್ಲಭಾಷೆಯಲ್ಲಿ ಪ್ರಸಾರವಾಗಲಿದೆ. ನೂತನ ವಾಹಿನಿಯ ಸಿಇಒ ಆಗಿ ನಿವೃತ್ತ ಐಎಎಸ್ ಅಧಿಕಾರಿ ರವಿ ಕಪೂರ್ ವರ್ಷದ ಅವಧಿಗೆ ನೇಮಕವಾಗಿದ್ದಾರೆ.

ಲೋಕಸಭಾ ಟಿವಿ ಹಾಗೂ ರಾಜ್ಯಸಭಾ ಟಿವಿಗಳನ್ನು ಒಗ್ಗೂಡಿಸುವ ಬಗ್ಗೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಹಾಗೂ ರಾಜ್ಯಸಭಾ ಸ್ಪೀಕರ್ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಒಮ್ಮತದಿಂದ ತೀರ್ಮಾನ ತೆಗೆದುಕೊಂಡರು. ಈ ವಿಲೀನದೊಂದಿಗೆ ರಾಜ್ಯಸಭೆ ಟಿವಿ ಸಿಇಒ ಮನೋಜ್ ಕುಮಾರ್ ಪಾಂಡೆ ಅವರನ್ನು ಸ್ಥಾನದಿಂದ ವಿಸರ್ಜಿಸಲಾಗಿದೆ.

 

Leave a Reply

Your email address will not be published. Required fields are marked *