Monday, 12th May 2025

ಸಮೀರ್‌ ವಾಂಖೆಡೆ ವರ್ಗಾವಣೆ

ಮುಂಬೈ/ ನವದೆಹಲಿ: ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಮಂಡಳಿ ಮುಂಬೈ ವಲಯ ಕಚೇರಿಯ ನಿರ್ದೇಶಕರಾಗಿದ್ದ ಭಾರತೀಯ ಕಂದಾಯ ಸೇವೆ ಅಧಿಕಾರಿ ಸಮೀರ್‌ ವಾಂಖೆಡೆ ಅವರನ್ನು ವರ್ಗಾವಣೆ ಮಾಡಲಾ ಗಿದೆ.

2021 ಡಿ.31ಕ್ಕೆ ವಲಯ ಕಚೇರಿಯ ನಿರ್ದೇಶಕರಾಗಿ ಅಧಿಕಾರದ ಅವಧಿ ಮುಕ್ತಾಯವಾಗಿತ್ತು. ಅವರು ನವದೆಹಲಿಯಲ್ಲಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದಲ್ಲಿ ಕೆಲಸ ಮಾಡಲಿದ್ದಾರೆ.

ಡ್ರಗ್ಸ್‌ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿ ದಂತೆ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಬಂಧನದ ಬಳಿಕ ಅವರು ಹೆಚ್ಚು ಬೆಳಕಿಗೆ ಬಂದಿದ್ದರು.