Sunday, 11th May 2025

Sambhal Violence: ಗಲಭೆ ಪೀಡಿತ ಸಂಭಾಲ್‌ಗೆ ತೆರಳಿದ ಕಾಂಗ್ರೆಸ್‌ ನಿಯೋಗಕ್ಕೆ ತಡೆ; ಭಾರೀ ಪ್ರತಿಭಟನೆ

sambhal protest

ಲಖನೌ: ಉತ್ತರಪ್ರದೇಶದ ಹಿಂಸಾಚಾರ ಪೀಡಿತ ಸಂಭಾಲ್‌ಗೆ(Sambhal Violence) ಭೇಟಿ ನೀಡಲು ಕಾಂಗ್ರೆಸ್‌ ನಿಯೋಗ ತೆರಳಿದ್ದು, ಈವ ವೇಳೆ ಭಾರೀ ಘರ್ಷಣೆ ಏರ್ಪಟ್ಟಿದೆ. ಗಲಭೆ ಪೀಡಿತ ಸ್ಥಳಕ್ಕೆ ರಾಜ್ಯಾಧ್ಯಕ್ಷ ಅಜಯ್ ರೈ ನೇತೃತ್ವದ ನಿಯೋಗ ಮುಂದಾದಾಗ ಪೊಲೀಸರು ತಡೆದಿದ್ದಾರೆ. ಈ ಕಾರಣದಿಂದಾಗಿ ಸೋಮವಾರ ಲಕ್ನೋದ ಉತ್ತರ ಪ್ರದೇಶ ಕಾಂಗ್ರೆಸ್ ಕಚೇರಿಯ ಹೊರಗೆಕೆಲ ಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಕಚೇರಿ ಗೇಟ್ ಬಳಿ ಭದ್ರತಾ ಸಿಬ್ಬಂದಿ ರೈ ಅವರ ಕಾರನ್ನು ತಡೆದರು. ಇದರಿಂದ ಕೋಪಗೊಂಡ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಶುರು ಮಾಡಿದ್ದು, ಘೋಷಣೆಗಳನ್ನು ಕೂಗಿದರು. ಇದರಿಂದಾಗಿ ಗದ್ದಲ ಸೃಷ್ಟಿಯಾಗಿತ್ತು. ಇನ್ನು ಅಜಯ್‌ ರೈ ಅವರಿಗೆ ಪೊಲೀಸರು ನೊಟೀಸ್‌ ಜಾರಿಗೊಳಿಸಿದ್ದು, ತಮ್ಮ ಭೇಟಿಯನ್ನು ಮುಂದೂಡುವಂತೆ ಸೂಚಿಸಿದ್ದಾರೆ.

ಈ ಬಗ್ಗೆ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಅಜಯ್‌ ರೈ ಪ್ರತಿಕ್ರಿಯಿಸಿದ್ದು, ಭಾರೀ ಭದ್ರತಾ ಕ್ರಮಗಳ ಹೊರತಾಗಿಯೂ ಪೊಲೀಸ್ ಆದೇಶವನ್ನು ಧಿಕ್ಕರಿಸಿ ಸಂಭಾಲ್‌ಗೆ ಭೇಟಿ ನೀಡುವುದಾಗಿ ಹೇಳಿದರು. ಅವರು ನನಗೆ ನೋಟಿಸ್ ನೀಡಿದ್ದಾರೆ ಮತ್ತು ಭೇಟಿಯನ್ನು ಮುಂದೂಡುವಂತೆ ಕೇಳಿದ್ದಾರೆ. ಆದರೆ ನಾವು ಪೊಲೀಸರು ಮತ್ತು ಸರ್ಕಾರ ಮಾಡಿದ ದೌರ್ಜನ್ಯವನ್ನು ಅರ್ಥಮಾಡಿಕೊಳ್ಳಲು ಶಾಂತಿಯುತವಾಗಿ ಹೋಗುತ್ತೇವೆ ಎಂದಿದ್ದಾರೆ.

ಏನಿದು ಘಟನೆ?

ಕೋಟ್ ಗರ್ವಿ ಪ್ರದೇಶದ ಶಾಹಿ ಜಾಮಾ ಮಸೀದಿಯ ಸರ್ವೇಗೆ ಜಿಲ್ಲಾ ನ್ಯಾಯಾಲಯ ಆದೇಶ ನೀಡಿತ್ತು. ನಂತರ ಅಲ್ಲಿ ಹಿಂಸಾಚಾರ ಭುಗಿಲೆದ್ದಿತು. ಸರ್ವೆಗೆ ಅನುಮತಿ ನೀಡಿ ಒಂದು ದಿನದೊಳಗೆ ಸಮೀಕ್ಷೆಯನ್ನು ನಡೆಸಲಾಯಿತು. ನ್ಯಾಯಾಲಯದ ಆದೇಶದ ಮೇರೆಗೆ ಸರ್ವೇ ಕಾರ್ಯ ನಡೆಸುತ್ತಿರುವ ಸಂದರ್ಭದಲ್ಲಿ ಭಾನುವಾರ ಭುಗಿಲೆದ್ದ ಘರ್ಷಣೆಯಲ್ಲಿ ಐವರು ಮೃತಪಟ್ಟಿದ್ದು, ಪೊಲೀಸರು ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದರು.

ಈ ಸುದ್ದಿಯನ್ನೂ ಓದಿ: Sambhal Violence: ಸಂಭಾಲ್‌ ಮಸೀದಿ ಸರ್ವೆಗೆ ಸುಪ್ರೀಂ ಕೋರ್ಟ್‌ ತಡೆ