ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ (Salman Khan) ಆಗಾಗ ಜೀವ ಬೆದರಿಕೆ ಬರುತ್ತಲೇ ಇರುತ್ತದೆ. ಇತ್ತೀಚೆಗೆ ಸಲ್ಮಾನ್ ಆಪ್ತ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ (Baba Siddique) ಹತ್ಯೆಯ ಬಳಿಕ ಸಲ್ಮಾನ್ ಖಾನ್ ಕೊಲ್ಲುವುದಾಗಿ ಸಾಕಷ್ಟು ಬೆದರಿಕೆ ಬಂದಿತ್ತು. ಅವರ ನಿವಾಸಕ್ಕೆ ಸಾಕಷ್ಟು ಭದ್ರತೆಯನ್ನು ಕೂಡ ಒದಗಿಸಲಾಗಿತ್ತು. ಇದೀಗ ಸಲ್ಮಾನ್ ಖಾನ್ ತಮ್ಮ ಮುಂಬೈ ನಿವಾಸ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಅವರ ಮನೆಯನ್ನು ಬುಲೆಟ್ ಪ್ರೂಫ್ ಗಾಜು ಮತ್ತು ವಿದ್ಯುತ್ ಬೇಲಿಯಿಂದ ಭದ್ರಪಡಿಸಲಾಗಿದೆ.
ನಿರಂತರವಾಗಿ ಬರುತ್ತಿರುವ ಬೆದರಿಕೆಯಿಂದಾಗಿ ಸಲ್ಲು ತಮ್ಮ ಮನೆಗೆ ನೀಲಿ ಬಣ್ಣದ ಬುಲೆಟ್ ಪ್ರೂಫ್ ಗಾಜು ಹಾಕಿಸಿದ್ದು, ಸದ್ಯ ಕೆಲಸ ನಡೆಯುತ್ತಿದೆ.
#WATCH | Mumbai, Maharashtra | Bulletproof glass installed in the balcony of actor Salman Khan's residence – Galaxy Apartment pic.twitter.com/x6BAvPOGyW
— ANI (@ANI) January 7, 2025
ಅಕ್ಟೋಬರ್ 12ರಂದು, ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ( Lawrence Bishnoi ) ಶೂಟರ್‌ಗಳು ಅವರ ಪುತ್ರ, ಶಾಸಕ ಜಿಶಾನ್ ಸಿದ್ದಿಕಿ ಕಚೇರಿಯ ಎದುರೇ ಗುಂಡು ಹಾರಿಸಿ ಕೊಲೆ ಮಾಡಿದ್ದರು. ಸಲ್ಮಾನ್ ಖಾನ್ ಹಾಗೂ ಸಿದ್ದಕಿ ಅತ್ಯಾಪ್ತರಾಗಿದ್ದರು. ಅವರ ಹತ್ಯೆಯ ನಂತರ ಸಲ್ಮಾನ್‌ಗೆ ಕೊಲೆ ಬೆದರಿಕೆ ಬಂದಿದ್ದವು.
1998 ರಲ್ಲಿ ಸಲ್ಮಾನ್ ಬಿಷ್ಣೋಯಿ ಸಮಾಜ ದೇವರೆಂದು ಪೂಜಿಸುವ ಕೃಷ್ಣಮೃಗವನ್ನು ಬೇಟೆಯಾಡಿದ ಆರೋಪ ಎದುರಿಸುತ್ತಿದ್ದಾರೆ. ನಂತರ ರಾಜಸ್ಥಾನ ಹೈ ಕೋರ್ಟ್ ಸಲ್ಮಾನ್ ಖಾನ್ ಅಪರಾಧಿ ಎಂದು ಘೋಷಿಸಿ ಶಿಕ್ಷೆಯನ್ನು ಪ್ರಕಟ ಮಾಡಿತ್ತು. ಹೈ ಕೋರ್ಟ್ ನಿರ್ಧಾರ ಪ್ರಶ್ನಿಸಿ ನಟ ಸುಪ್ರೀಂ ಮೊರೆ ಹೋಗಿದ್ದರು. ಈ ಘಟನೆಯ ನಂತರ ಲಾರೆನ್ಸ್ ಬಿಷ್ಣೋಯ್ ಮಾತ್ತು ಗ್ಯಾಂಗ್ ಸಲ್ಮಾನ್ ಖಾನ್ ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿದೆ. ಈ ಹಿಂದೆ ಹಲವು ಬಾರಿ ಸಲ್ಮಾನ್ ಮನೆ ಮೇಲೆ ಗುಂಡಿನ ದಾಳಿ ನಡೆದಿದ್ದವು.
ಬಾಬಾ ಸಿದ್ಧಿಕಿ ಹತ್ಯೆಯ ಬಳಿಕ ಸಲ್ಮಾನ್ ಖಾನ್‌ಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿತ್ತು. ಅವರ ನಿವಾಸದ ಸುತ್ತ ಹೈ ಸೆಕ್ಯುರಿಟಿ ನೀಡಿದ್ದು ಕಮಾಂಡೋ ಸೆಂಟರ್ ತೆರೆಯಲಾಗಿದೆ. ಮುಂಬೈ ಪೊಲೀಸರು ಝಡ್ ಪ್ಲಸ್ ಸೆಕ್ಯುರಿಟಿಯನ್ನು ನೀಡಿದ್ದರು.
ಈ ಸುದ್ದಿಯನ್ನು ಓದಿ : Baba Siddique: ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ನಡೆಸಿದಾಗಲೇ ನಡೆದಿತ್ತಾ ಸಿದ್ದಿಕಿ ಹತ್ಯೆ ಪ್ಲಾನ್ ?