Sunday, 11th May 2025

ಹೊಸ ಪಕ್ಷ ಸ್ಥಾಪನೆ ವದಂತಿ ತಳ್ಳಿ ಹಾಕಿದ ಸಚಿನ್ ಪೈಲಟ್

ಜೈಪುರ: ರಾಜಸ್ಥಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಹೊಸ ಪಕ್ಷ ಸ್ಥಾಪಿಸುವ ತಮ್ಮ ನಿರ್ಧಾರ ದಿಂದ ಹಿಂದೆ ಸರಿದಿದ್ದಾರೆ.

ತಂದೆ ರಾಜೇಶ್ ಪೈಲಟ್ ಅವರ ಪುಣ್ಯತಿಥಿಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಹಿಂದೆ ಸರಿಯುವುದಿಲ್ಲ, ರಾಷ್ಟ್ರಕ್ಕೆ ಸತ್ಯದ ರಾಜಕೀಯ ಬೇಕು, ಜನರು ಭವಿಷ್ಯದ ಜೊತೆ ಆಟವಾಡುವು ದನ್ನು ನಾನು ಬಯಸುವುದಿಲ್ಲ. ಯುವಕರ, ನನ್ನ ನೀತಿ ಸ್ಪಷ್ಟವಾಗಿದೆ, ನನಗೆ ಶುದ್ಧ ರಾಜಕಾರಣ ಬೇಕು ಎಂದು ತಿಳಿಸಿದರು.

ರಾಜಸ್ಥಾನದಲ್ಲಿ ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗ ಹೊಸ ಪಕ್ಷವನ್ನು ಪ್ರಾರಂಭಿಸಬಹುದು ಎಂಬ ಊಹಾಪೊೀಹವನ್ನು ನಿರಾಕರಿಸಿದ ಅವರು, ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಪೈಲಟ್ ತಮ್ಮದೇ ಪಕ್ಷವನ್ನು ಘೋಷಿಸಬಹುದು ಎಂಬ ವದಂತಿಗಳನ್ನು ತಳ್ಳಿಹಾಕಿದರು.