Sunday, 11th May 2025

ಶಬರಿಗಿರಿಯ ದರ್ಶನ ಸಮಯ ಒಂದು ಗಂಟೆ ವಿಸ್ತರಣೆ

ಪತ್ತನಂತಿಟ್ಟ : ಮಣಿಕಂಠನ ದರ್ಶನಕ್ಕೆ ಅಯ್ಯಪ್ಪ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ತಿರುವಾಂಕೂರು ದೇವಸ್ಥಾನಂ ಮಂಡಳಿ ಶಬರಿಗಿರಿ ದರ್ಶನದ ಸಮಯವನ್ನು ಒಂದು ಗಂಟೆಗಳ ಕಾಲ ವಿಸ್ತರಿಸಿದೆ.

ಶಬರಿಗಿರಿಯ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರತಿದಿನ ಸಂಜೆ 4 ರಿಂದ ರಾತ್ರಿ 11ರ ವರೆಗೆ ಭಕ್ತರು ದೇಗುಲಕ್ಕೆ ಭೇಟಿ ನೀಡುವ ಸಮಯವಾಗಿತ್ತು. ಈಗ ಮಧ್ಯಾಹ್ನ 3 ರಿಂದ ದೇಗುಲಕ್ಕೆ ಭೇಟಿ ನೀಡಬಹುದು ಎಂದು ಹೇಳಿದರು. ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯುವ ಭಕ್ತರಿಗೆ ನೀರು, ಬಿಸ್ಕತ್‌ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ದಿನಕ್ಕೆ 75 ಸಾವಿರ ಭಕ್ತರಿಗೆ ಮಾತ್ರ ಅವಕಾಶ ನೀಡುವಂತೆ ಟಿಡಿಬಿಗೆ ಮನವಿ ಮಾಡಲಾಗಿದೆ. ವರ್ಚುವಲ್ ಕ್ಯೂ ಮೂಲಕ ನಿತ್ಯ 90 ಸಾವಿರ ಹಾಗೂ ಸ್ಪಾಟ್ ಬುಕ್ಕಿಂಗ್ ಮೂಲಕ ಸುಮಾರು 30 ಸಾವಿರ ಬುಕ್ಕಿಂಗ್ ಆಗುತ್ತಿದ್ದು, ಭಕ್ತರ ಸಂಖ್ಯೆ ಹೆಚ್ಚಿದೆ.

ಮಂಡಲ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ನವೆಂಬರ್ 16 ರಂದು ಸಂಜೆ ತೆರೆಯಲಾಯಿತು. ನವೆಂಬರ್ 17 ರಂದು ಸ್ವಾಮಿಯ ದರ್ಶನ ಪ್ರಾರಂಭವಾಯಿತು. ಆಗ ಮಂಡಲ ಮಕರವಿಳಕ್ಕು ಆಚರಣೆಯೂ ಆರಂಭವಾಯಿತು.

ಎರಡು ತಿಂಗಳ ಕಾಲ ನಡೆಯುವ ಮಣಿಕಂಠನ ಮಹಾದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ.

Leave a Reply

Your email address will not be published. Required fields are marked *