Thursday, 15th May 2025

ವರ್ಷಾಂತ್ಯಕ್ಕೆ ರೂಪಾಯಿ ಮೌಲ್ಯ ಶೇ.11.3 ರಷ್ಟು ಕುಸಿತ

ವದೆಹಲಿ: ಯುಎಸ್ ಫೆಡರಲ್ ಬ್ಯಾಂಕ್ ಹಣಕಾಸು ನೀತಿಯಿಂದಾಗಿ ಭಾರತದ ರೂಪಾಯಿ ಮೌಲ್ಯ 2022ರ ವರ್ಷಾಂತ್ಯಕ್ಕೆ ಶೇ.11.3 ರಷ್ಟು ಕುಸಿತಕಂಡಿದೆ. ಈ ಮೂಲಕ 2013ರ ನಂತರದಲ್ಲಿ ಅತಿಹೆಚ್ಚು ವಾರ್ಷಿಕ ಮೌಲ್ಯ ಕುಸಿತವಾಗಿರುವ ಏಷ್ಯನ್ ಕರೆನ್ಸಿ ಎಂಬ ಅಪಖ್ಯಾತಿಗೆ ಪಾತ್ರವಾಗಿದೆ.

2021ರ ಅಂತ್ಯದಲ್ಲಿ 74.33 ರೂ. ಇದ್ದ ಡಾಲರ್ (USD) ಮೌಲ್ಯ 2022ರ ಅಂತ್ಯದ ವೇಳೆಗೆ 82.75 ರೂಪಾಯಿವರೆಗೆ ಏರಿಕೆ ಕಂಡಿದೆ.

ರಷ್ಯಾ ಮತ್ತು ಉಕ್ರೇನ್ ಸಂಘರ್ಷದಿಂದ ತೈಲ ಬೆಲೆಯಲ್ಲಿ ಏರಿಳಿತಗಳಿಂದಾಗಿ ರೂಪಾಯಿ ಮೌಲ್ಯ ಕುಸಿತವಾಯಿತು. ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಚಾಲ್ತಿ ಖಾತೆಯ ಕೊರತೆಯನ್ನು ಗರಿಷ್ಠ ಮಟ್ಟಕ್ಕೆ ತಳ್ಳಿತು. ಸದ್ಯ ಹೊಸ ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂಪಾಯಿ ಮೌಲ್ಯವು 81.50 ರೂ. ನಿಂದ 83.50 ರೂ. ನಡುವೆ ಇರಲಿದೆ.

ರೂಪಾಯಿ ಮೌಲ್ಯಯುತವಾಗಿದ್ದರೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವ್ಯವ ಹಾರಗಳೆಲ್ಲವೂ ಡಾಲರ್ ಮೂಲಕ ನಡೆಯುವುದರಿಂದ ರೂಪಾಯಿ ಆಯ್ಕೆಯಾಗುವು ದಿಲ್ಲ. ಆದರೆ ಭಾರತೀಯ ಶೇರುಗಳಲ್ಲಿ ವಹಿವಾಟನ್ನು ಮುಂದುವರಿಸಿದರೆ, ರೂಪಾಯಿ ಮೌಲ್ಯ ಸ್ಥಿರವಾಗಲಿದೆ ಎಂದು ಒಸಿಬಿಸಿ ಬ್ಯಾಂಕ್‌ನ ಎಫ್‌ಎಕ್ಸ್ ತಂತ್ರಜ್ಞ ಕ್ರಿಸ್ಟೋಫರ್ ವಾಂಗ್ ಹೇಳಿದ್ದಾರೆ.

Read E-Paper click here