Sunday, 11th May 2025

ಆರೆಸ್ಸೆಸ್‌ನವರು 21ನೇ ಶತಮಾನದ ಕೌರವರು: ರಾಹುಲ್ ವಾಗ್ದಾಳಿ

ಚಂಡೀಗಢ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿ ರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಆರೆಸ್ಸೆಸ್‌ನವರನ್ನು 21ನೇ ಶತಮಾ ನದ ಕೌರವರು ಎಂದು ವಾಗ್ದಾಳಿ ನಡೆಸಿದ್ದಾರೆ.

ಯಾತ್ರೆ ಕೈಗೊಂಡಿರುವ ರಾಹುಲ್, ದಾರಿ ಮಧ್ಯ ಜನರನ್ನು ಉದ್ದೇಶಿಸಿ ಮಾತನಾಡಿದರು. ಮಹಾಭಾರತದ ಭೂಮಿಯಾಗಿರುವ ಹರ್ಯಾಣದಲ್ಲಿ ಆರೆಸ್ಸೆಸ್‌ನವರನ್ನು ಕೌರವ ರೊಂದಿಗೆ ಹೋಲಿಕೆ ಮಾಡಿ ಟೀಕಿಸಿದರು.

ಯಾರು ಕೌರವರು? ನಾನು ನಿಮಗೆ ಮೊದಲು 21ನೇ ಶತಮಾನದ ಕೌರವರ ಬಗ್ಗೆ ಹೇಳುವೆ. ಭಾರತದ ಎರಡ್ಮೂರು ಶತ ಕೋಟ್ಯಧೀಶರು ಈ ಕೌರವರ ಜತೆಗಿದ್ದಾರೆ ಎಂದು ಟೀಕಿಸಿದರು.

ನೋಟು ಅಮಾನ್ಯೀಕರಣ, ತಪ್ಪು ಜಿಎಸ್‌ಟಿ, ಕೃಷಿ ಕಾನೂನುಗಳು ಈ ನೆಲದ ತಪಸ್ವಿ ಗಳಿಂದ ಕದಿಯುವ ಮಾರ್ಗವೆಂದು ಅವರಿಗೆ ತಿಳಿದಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಈ ನಿರ್ಧಾರಗಳಿಗೆ ಸಹಿ ಹಾಕಿದರು. ಆದರೆ ನೀವು ಒಪ್ಪಲಿ ಅಥವಾ ಇಲ್ಲದಿರಲಿ ಭಾರತದ 2-3 ಶತಕೋಟ್ಯಧೀಶರಗಳ ಶಕ್ತಿ ಇದರ ಹಿಂದೆ ಇತ್ತು ಎಂದು ರಾಹುಲ್ ಹೇಳಿದರು.