Sunday, 11th May 2025

Robbery: ಹಾಡಹಗಲೇ ನಡುರಸ್ತೆಯಲ್ಲಿ ಕಾರು ಅಡ್ಡಗಟ್ಟಿ 2.5 kg ಚಿನ್ನ ಲೂಟಿ; ರಾಬರಿಯ ಭೀಕರ ದೃಶ್ಯ ಇಲ್ಲಿದೆ ನೋಡಿ

robbery

ತ್ರಿಶೂರ್‌: ಕೇರಳದ ತ್ರಿಶೂರ್‌ನಲ್ಲಿ ಹಾಡಹಗಲೇ ಭಾರೀ ರಾಬರಿ (Robbery) ನಡೆದಿದ್ದು, ಬರೋಬ್ಬರಿ 2.5 kg ತೂಕದ ಚಿನ್ನವನ್ನು ದರೋಡೆಕೋರರು ಹೊತ್ತೊಯ್ದಿದ್ದಾರೆ. ಇನ್ನು ರಾಷ್ಟ್ರೀಯ ಹೆದ್ದಾರಿಯಲ್ಲೇ ಈ ಘಟನೆ ನಡೆದಿದ್ದು, ರಾಬರಿ ಭೀಕರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral video) ಆಗುತ್ತಿದೆ.

ವೈರಲ್‌ ಆಗಿರುವ ವಿಡಿಯೋದಲ್ಲೇನಿದೆ?

ಕೇರಳದ ಪೀಚಿ ಎಂಬಲ್ಲಿ ಈ ಘಟನೆ ನಡೆದಿದ್ದು, 12ಜನ ದರೋಡೆಕೋರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಲೂಟಿ ಮಾಡಿದ್ದಾರೆ. ಮೂರು ಕಾರುಗಳಲ್ಲಿ ಬಂದು ಈ ಗ್ಯಾಂಗ್‌ SUV ಕಾರೊಂದನ್ನು ತಡೆದು ಅದರಲ್ಲಿ ಇಬ್ಬರು ಚಿನ್ನದ ಸಮೇತ ಕಿಡ್ನಾಪ್‌ ಮಾಡಿದ್ದಾರೆ. ಕಿಡ್ನ್ಯಾಪ್‌ ಆದ ಇಬ್ಬರು SUV ಕಾರಿನಲ್ಲಿ ಎರಡೂವರೆ ಕೆಜಿ ಚಿನ್ನ ತುಂಬಿದ್ದ ಬಾಕ್ಸ್‌ ಜತೆ ಪ್ರಯಾಣಿಸುತ್ತಿದ್ದರು. ಈ ಬಗ್ಗೆ ಮೊದಲೇ ಮಾಹಿತಿ ಇದ್ದ ದರೋಡೆಕೋರರು ನಿರ್ಮಾಣ ಹಂತದಲ್ಲಿದ್ದ ಕಾರು ಫ್ಲೈ ಓವರ್‌ ಬಳಿ ತಲುಪುತ್ತಿದ್ದಂತೆ ಕಾರನ್ನು ತಡೆದಿದ್ದಾರೆ. ಚಿನ್ನ ಸಮೇತ ಇಬ್ಬರನ್ನು ಕಿಡ್ನಾಪ್‌ ಮಾಡಿ ಕಿಡಿಗೇಡಿಗಳು ಎಸ್ಕೇಪ್‌ ಆಗ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಬುಧವಾರ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಫ್ಐಆರ್ ಪ್ರಕಾರ, ಘಟನೆ ಸೆಪ್ಟೆಂಬರ್ 22 ರಂದು ಸಂಭವಿಸಿದೆ ಮತ್ತು ಅರುಣ್ ಸನ್ನಿ ಮತ್ತು ರೋಜಿ ಥಾಮಸ್ ಎಂಬ ಇಬ್ಬರು ಜನರನ್ನು ಅಪಹರಿಸಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದೆ.

ಎಫ್‌ಐಆರ್‌ನಲ್ಲಿರುವ ದೂರುಗಳ ಆಧಾರದಲ್ಲಿ ಅರುಣ್‌ ಮತ್ತು ರೋಜಿ ಅವರನ್ನು ಸರಿಯಾಗಿ ಥಳಿಸಿರುವ ದುಷ್ಕರ್ಮಿಗಳು ₹ 1.84 ಕೋಟಿ ಮೌಲ್ಯದ ಚಿನ್ನಾಭರಣಗಳ ದೋಚಿದೆ ಎಂದು ಆರೋಪಿಸಲಾಗಿದೆ. ನಂತರ ಅವರಿಬ್ಬರನ್ನೂ ಬಿಡುಗಡೆ ಮಾಡಲಾಯಿತು. ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಹಾಡಹಗಲೇ ಬಾಲಕಿಯನ್ನು ರಸ್ತೆಯ ಮೇಲೆ ಎಳೆದೊಯ್ದ ದರೋಡೆಕೋರರು; ಪಂಜಾಬ್ ಪೊಲೀಸರು ಮಾಡಿದ್ದೇನು?