Wednesday, 14th May 2025

ತೂಗು ಸೇತುವೆ ದುರಂತ: ಕೇಜ್ರಿವಾಲ್ ರೋಡ್ ಶೋ ರದ್ದು

ಚಂಡಿಗಢ: ಗುಜರಾತ್‍ನ ಮೋಬಿನಲ್ಲಿ ನಡೆದ ತೂಗು ಸೇತುವೆ ದುರಂತದ ಹಿನ್ನೆಲೆ ಯಲ್ಲಿ ಹರ್ಯಾಣದ ಅದಂಪುರ್‍ನಲ್ಲಿ ನಡೆಯಬೇಕಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ರೋಡ್ ಶೋ ರದ್ದುಗೊಂಡಿದೆ.

ಉಪಚುನಾವಣೆ ಸಲುವಾಗಿ ವಿವಿಧ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ನವೆಂಬರ್ 3ಕ್ಕೆ ಉಪಚುನಾವಣೆ ನಡೆಯಲಿದ್ದು, ಮುನ್ನ ದಿನ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿ ವಾಲ್ ಸೋಮವಾರ ರೋಡ್ ಶೋ ಹಮ್ಮಿಕೊಂಡಿದ್ದರು.

ಭಾನುವಾರ ಮೋರ್ಬಿಯಲ್ಲಿ ತೂಗು ಸೇತುವೆ ಕುಸಿದು 132ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ನಾಪತ್ತೆಯಾಗಿದ್ದಾರೆ.

ದುರ್ಘಟನೆಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ರೋಡ್ ಶೋ ರದ್ದು ಮಾಡಿದ್ದಾರೆ ಎಂದು ಹರ್ಯಾಣದ ಉಸ್ತುವಾರಿ ನಾಯಕ ತಿಳಿಸಿದ್ದಾರೆ.

ಪಂಜಾಬ್‍ನ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಇತ್ತೀಚೆಗೆ ಈ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು.