Tuesday, 13th May 2025

Road Accident: ರಣ ಭೀಕರ ಅಪಘಾತ; 6 ವಿದ್ಯಾರ್ಥಿಗಳು ಬಲಿ; ಗುರುತೇ ಸಿಗದಷ್ಟು ಮೃತದೇಹಗಳು ಛಿದ್ರ ಛಿದ್ರ!

Accident

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಭೀಕರ ರಸ್ತೆ ಅಪಘಾತ(Road Accident) ಸಂಭವಿಸಿದ್ದು, ಸ್ಥಳದಲ್ಲೇ ಆರು ವಿದ್ಯಾರ್ಥಿಗಳು ಕೊನೆಯುಸಿರೆಳೆದಿದ್ದಾರೆ. ಮಂಗಳವಾರ ಮುಂಜಾನೆ ಡೆಹ್ರಾಡೂನ್‌ನ ಓಎನ್‌ಜಿಸಿ ಕ್ರಾಸಿಂಗ್‌ ಸಮೀಪ ಈ ಭಯಾನಕ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಸರಕು ಸಾಗಾಣಿಕೆಯ ಲಾರಿಯೊಂದು ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ಒಟ್ಟು ಏಳು ಮಂದಿ ಪೈಕಿ 6ಜನ ಅಸುನೀಗಿದ್ದು, ಒಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾಳೆ ಎನ್ನಲಾಗಿದೆ.

ಪ್ರಾಣ ಕಳೆದುಕೊಂಡ ಆರು ವಿದ್ಯಾರ್ಥಿಗಳಲ್ಲಿ ಮೂವರು ಹುಡುಗರು ಮತ್ತು ಮೂವರು ಹುಡುಗಿಯರು ಎಂದು ಗುರುತಿಸಲಾಗಿದೆ. ಪ್ರಾಣಾಪಾಯದಿಂದ ಪಾರಾದ ಒಬ್ಬ ವಿದ್ಯಾರ್ಥಿಯ ಸ್ಥಿತಿ ತೀರಾ ಗಂಭೀರವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೊಳಗಾದ ಎಲ್ಲಾ ವಿದ್ಯಾರ್ಥಿಗಳು ಡೆಹ್ರಾಡೂನ್‌ ನ ಖಾಸಗಿ ಕಾಲೇಜುವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಪ್ರಾಥಮಿಕ ತನಿಖೆಯ ಪ್ರಕಾರ ಲಾರಿ ರಭಸವಾಗಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ನಜ್ಜುಗುಜ್ಜಾಗಿ ಎರಡು ಭಾಗಗಳಾಗಿ ತುಂಡಾಗಿದೆ. ನಜ್ಜುಗುಜ್ಜಾದ ಕಾರಿನೊಳಗಿಂದಲೇ ಮೃತ ದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಗುರುತೇ ಸಿಗದಷ್ಟು ದೇಹಗಳು ಛಿದ್ರಗೊಂಡು ರಕ್ತಸಿಕ್ತವಾಗಿದ್ದು, ಅಪಘಾತ ನಡೆದ ಸ್ಥಳದಿಂದ ಕ್ಷಣ ಮಾತ್ರದಲ್ಲಿಯೇ ಟ್ರಕ್‌ ಚಾಲಕ ನಾಪತ್ತೆಯಾಗಿದ್ದಾನೆ. ಮಾಹಿತಿ ಸಿಕ್ಕ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಶುರು ಮಾಡಿದ್ದಾರೆ. ಐವರು ವಿದ್ಯಾರ್ಥಿಗಳ ಮೃತ ದೇಹವನ್ನು ಡೂನ್‌ ಆಸ್ಪತ್ರೆಗೆ ಕಳುಹಿಸಲಾಗಿದ್ದು ಒಬ್ಬರು ವಿದ್ಯಾರ್ಥಿಯ ದೇಹವನ್ನು ಮಹಂತ್‌ ಇಂದ್ರೇಶ್‌ ಆಸ್ಪತ್ರೆಗೆ ಕಳುಹಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Kolkata Horror: ಕೋಲ್ಕತ್ತಾ ವೈದ್ಯೆ ಕೊಲೆ ಹಿಂದೆ ಇದ್ಯಾ ಪೊಲೀಸ್ ಕಮಿಷನರ್ ಕೈವಾಡ? ಮಾಧ್ಯಮದೆದುರು ಆರೋಪಿ ಕಿರುಚಾಡಿದ್ದೇಕೆ? ವಿಡಿಯೊ ವೈರಲ್‌